ವೆಂಟೆಡ್ ಡ್ಯಾಂ ಮೇಲೆ ದ್ವಿಚಕ್ರ ವಾಹನ ಸಂಚರಿಸಲು ಅವಕಾಶ














ಆಲೆಟ್ಟಿಯ ನಾಗಪಟ್ಟಣ ಸೇತುವೆ ಕಾಮಗಾರಿ ಕೆಲಸ ನಡೆಯುತ್ತಿದ್ದು ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು ಪರ್ಯಾಯ ಅಜ್ಜಾವರ ರಸ್ತೆಯ ಮೂಲಕ ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಸೇತುವೆಯ ಪಕ್ಕದಲ್ಲಿ ವೆಂಟೆಡ್ ಡ್ಯಾಂ ಇರುವುದರಿಂದ ಕನಿಷ್ಠ ಪಕ್ಷ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶಕಲ್ಪಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಇಂದಿನಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಡ್ಯಾಂ ಮೇಲೆ ಅವಕಾಶ ನೀಡಲಾಗಿದೆ.
ಡ್ಯಾಂ ನಿಂದ ಮುಖ್ಯ ರಸ್ತೆಗೆ ಸಂಪರ್ಕಿಸುವಲ್ಲಿ ಖಾಸಗಿ ಜಾಗವಿದ್ದು ಅವರ ಅನುಮತಿ ಪಡೆದು
ದ್ವಿಚಕ್ರ ಹೋಗಲು ಅನುಕೂಲವಾಗುವಂತೆ ಮಣ್ಣು ಹಾಕಿ ಗುಂಡಿ ಮುಚ್ಚಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದಂತಾಗಿದೆ.







