ಅಜ್ಜಾವರ : ದೊಡ್ಡೇರಿ ಕಾರ್ಯಕ್ಷೇತ್ರದ ಅಮೃತ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಅಜ್ಜಾವರ ವಲಯ ದೊಡ್ಡೇರಿ ಕಾರ್ಯಕ್ಷೇತ್ರದ ಅಮೃತ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಅ. 25ರಂದು ನಡೆಯಿತು.


ಕಾರ್ಯಕ್ರಮವನ್ನು ಕೋಡಿಯಾಲಬೈಲು ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸವಿತಾ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಸ್ವ ಉದ್ಯೋಗ ಮಾಡಿ ಕುಟುಂಬ ನಿರ್ವಹಣೆ, ಕೇಂದ್ರದ ಸದಸ್ಯರಿಗೆ ಸಿಗುವ ಮಾಹಿತಿ, ಅವಕಾಶಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ದೊಡ್ಡೇರಿ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಲಯ ಮೇಲ್ವಿಚಾರಕಿ ಅನಿತಾ ಪ್ರಸ್ತಾವಿಕ ಮಾತುಗಳನ್ನಾಡಿದರು. ದೊಡ್ಡೇರಿ ವನದುರ್ಗಾ ದೇವಿ ಭಜನಾ ಮಂದಿರದ ಅಧ್ಯಕ್ಷರಾದ ಚಂದ್ರಶೇಖರ, ತೀರ್ಪುಗಾರರದ ಆಶೀಶ್, ಪದ್ಮಿನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನ ವಿಕಾಸ ಸಮನ್ವಧಿಕಾರಿ ಸುಜಾತ ಬಿ ಮಾಡಿದರು. ಜ್ಞಾನ ವಿಕಾಸ ಸಂಯೋಜಕಿ ಹೇಮಾವತಿ ಸ್ವಾಗತಿಸಿ, ಸೇವಾಪ್ರತಿನಿಧಿ ಉಷಾಜ್ಯೋತಿ ವಂದಿಸಿದರು. ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಣೆ ಮಾಡಲಾಯಿತು. ನಂತರ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.