ಸುಳ್ಯ ಠಾಣೆಯಲ್ಲಿ ದೂರು, ಪ್ರಕರಣ ದಾಖಲು
ಕಲ್ಲುಗುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬ ಪಕ್ಕದ ಮನೆಯ ನಾಯಿಯನ್ನು ಅ 26 ರಂದು ಹೊ














ಹೊಡೆದು ಕೊಂದ ಆರೋಪದಡಿಯಲ್ಲಿ ಆರೋಪಿಯ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದು ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ಕಲ್ಲುಗುಂಡಿಯಲ್ಲಿ ವಾಸವಿರುವ ಸಿಂಚು ಎಂಬುವರ ಮನೆಯ ಸಾಕು ನಾಯಿಯನ್ನು ಆರೋಪಿ ಜೋಸೆಫ್ ಎಂಬಾತ ಒಡೆದು ಕೊಂದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿ ಜೋಸೆಫ್ ಮೂಲತ ಕೇರಳ ಪತ್ತನಚಿಟ್ಟ ಜಿಲ್ಲೆಯವರಾಗಿದ್ದು ಇವರು ಕಲ್ಲುಗುಂಡಿಯಲ್ಲಿ ಕಳೆದ ಅನೇಕ ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಜೋಸೆಫ್ ಎಂಬಾತನನ್ನು ಸುಳ್ಯ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.






