













ಮುರುಳ್ಯ ಗ್ರಾಮದಲ್ಲಿ ವಿವಾದಕ್ಕೆ ಗುರಿಯಾಗಿರುವ ಕುಮ್ಕಿ ಜಮೀನಲ್ಲಿ ತಲೆ ತಲಾಂತರದಿಂದ ಆರಾಧಿಸಿ ಕೊಂಡು ಬರುತ್ತಿದ್ದ ರಕ್ತೇಶ್ವರಿ ದೈವ ಮತ್ತು ಪರಿವಾರ ದೈವಗಳ ಜಾಗವನ್ನು l ಜಿಲ್ಲಾಧಿಕಾರಿಗಳು ವಕ್ಫ್ ಬೋರ್ಡ್ ನ ಮುಸ್ಲಿಂ ದಫನ ಭೂಮಿ ಗೆ ಮಂಜೂರು ಗೊಳಿಸಲಾಗಿರುವ ವಿಚಾರವಾಗಿ ಇಂದು ಜಮೀನಿನ ವಾರಿಸುದಾರರಾದ ಶ್ರೀಮತಿ ಚೇತನರವರು ಆಕ್ಷೇಪಣೆಯನ್ನು ಸಲ್ಲಿಸಿ ಮುಂದಿನ ಹಂತದ ಸರ್ವೆ ಗಡಿ ಗುರುತನ್ನು ಮಾಡಬಾರದೆಂದು ಆಕ್ಷೇಪಣೆಯಲ್ಲಿ ತಿಳಿಸಿದ್ದಾರೆ.
ಈ ಮನವಿಯನ್ನು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ.
ಈ ಸಂದರ್ಭದಲ್ಲಿ ಬೆಳ್ಳಾರೆ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ ಮತ್ತು ತಾರನಾಥ ಕೊಚ್ಚಿ ಸುಳ್ಯ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ ಉಪಸ್ಥಿತರಿದ್ದು ಮಾತುಕತೆ ನಡೆಸಲಾಯಿತು.







