ಮುಳ್ಯ-ಅಟ್ಲೂರು ಶಾಲೆಯಲ್ಲಿ ನೂತನ ಕೊಠಡಿಗಳಿಗೆ ಶಂಕುಸ್ಥಾಪನೆ, ಸ್ಮಾರ್ಟ್ ತರಗತಿ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ

0

 

ಅಜ್ಜಾವರ ಗ್ರಾಮದ ಮುಳ್ಯ-ಅಟ್ಲೂರು ಶಾಲೆಯ ದತ್ತು ಪ್ರಾಯೋಜಕರಾದ ರವಿಪ್ರಕಾಶ್ ಅಟ್ಲೂರುರವರು ಸುಮಾರು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಕೊಡುಗೆಯಾಗಿ ನೀಡುತ್ತಿರುವ 2 ಕೊಠಡಿಗಳಿಗೆ ಗಾಂಧಿ-ಶಾಸ್ತ್ರಿ ದಿನಾಚರಣೆಯಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವರವರು ಶಿಲಾನ್ಯಾಸ ನೆರವೇರಿಸಿದರು.

ಇದೆ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘದವರು ಸೆಲ್ಕೋ ಸೋಲಾರ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಶಾಲೆಗೆ ನೀಡಿದ ಸ್ಮಾರ್ಟ್ ತರಗತಿ
ಯನ್ನು ಶಾಲೆಯ ಸ್ಥಾಪಕ ಮುಖ್ಯಶಿಕ್ಷಕರಾದ ಕೃಷ್ಣ ನಾವಡರು ಉದ್ಘಾಟಿಸಿದರು.

 

ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಹಳೆವಿದ್ಯಾರ್ಥಿಗಳಾದ ಶ್ರೀಕೃಷ್ಣ ಮುಳ್ಯ ನಡುಮನೆ ಹಾಗೂ ಅಚ್ಯುತ ಅಟ್ಲೂರೂರವರನ್ನು ಮತ್ತು ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದು, ಮುಖ್ಯ ಶಿಕ್ಷಕಿಯಾಗಿ ಪದೋನ್ನತಿಗೊಂಡು ವರ್ಗಾವಣೆಗೊಂಡ ಶ್ರೀಮತಿ ಧನಲಕ್ಷ್ಮೀ ಕುದ್ಪಾಜೆ ಯವರನ್ನು ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸ್ವಾಭಿಮಾನಿ ಬಳಗ, ರವಿಪ್ರಕಾಶ್ ಅಟ್ಲೂರು ಮತ್ತು ಮನೆಯವರು ಹಾಗೂ ಶಾಲಾ ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮ ನೆರವೇರಿಸಿದ ಹಿರಿಯ ಶಿಕ್ಷಕಿ ಶ್ರೀಮತಿ ಕಲಾವತಿ ವೆಂಕಟಕೃಷ್ಣಯ್ಯ ಅಟ್ಲೂರು ಸಭಾಧ್ಯಕ್ಷತೆ ವಹಿಸಿದ್ದರು.
ಅಜ್ಜಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಲೀಲಾ ಮನಮೋಹನ ಸಭಾಕಾರ್ಯಕ್ರಮ ಉದ್ಘಾಟಿಸಿದರು.
ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಎಲ್ಲಾ ಗಣ್ಯರು ಗಾಂಧಿಜಿ ಮತ್ತು ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಮನ ಸಲ್ಲಿಸಿದರು.
ಶಾಲಾ ದತ್ತು ಪ್ರಾಯೋಜಕ ರವಿಪ್ರಕಾಶ್ ಅಟ್ಲೂರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಶ್ವನಾಥ ಮುಳ್ಯ-ಮಠ, ಶಿವಕುಮಾರ ಹೊಸಗದ್ದೆ, ರಾಘವ ಮುಳ್ಯ ಕಜೆ, ಶಾಲಾ ಮುಖ್ಯ ಶಿಕ್ಷಕ ಶಿವರಾಮ ಕೇನಾಜೆ, ಶಿಕ್ಷಣ ಸಂಯೋಜಕ ಚಂದ್ರಶೇಖರ, ಶ್ರೀ ಮಹಾಗಣಪತಿ ಭಜನಾ ಮಂಡಳಿ ಅಧ್ಯಕ್ಷ ಧರ್ಮಪಾಲ ಬಟ್ರೆಮಕ್ಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದವರು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡಿದ ಐಡೆಂಟಿಟಿ ಕಾರ್ಡುಗಳನ್ನು ವಿತರಿಸಲಾಯಿತು.
ವರ್ಗಾವಣೆಗೊಂಡ ಧನಲಕ್ಷಿ ಕುದ್ಪಾಜೆಯವರು ಶಾಲೆಗೆ ಗ್ರೀನ್ ಬೋರ್ಡ್ ನ್ನು ಕೊಡುಗೆಯಾಗಿ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ ಧನ್ಯವಾದ ಸಮರ್ಪಿಸಿದರು.
ಸಹ ಶಿಕ್ಷಕಿ ಶ್ರೀಮತಿ ಅಲಕನಂದಿನಿ ಕಾರ್ಯಕ್ರಮ ನಿರೂಪಿಸಿದರು.
ಸಭಕಾರ್ಯಕ್ರಮದ ಮೊದಲು ಶಾರದಾ ಪೂಜೆ ನಡೆಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಜ್ಜಾವರ ವಲಯ ಮೇಲ್ವಿಚಾರಕಿ ಶ್ರೀಮತ್ ವಿಶಾಲಾ ಕೆ.
ಸೆಲ್ಕೋ ಸೋಲಾರ್ ಪ್ರೈವೇಟ್ ನ ಏರಿಯಾ ಮ್ಯಾನೇಜರ್ ವೇದಿಕೆಯಲ್ಲಿ ಉಪಸ್ಥಿ ತರಿದ್ದರು.