ಸುಬ್ರಹ್ಮಣ್ಯದಲ್ಲಿ ತೋಟಗಾರಿಕಾ ಬೆಳೆಗಳ ನಿರ್ವಹಣೆ ಸಂಸ್ಕರಣೆ ಹಾಗೂ ಕಾರ್ಯಾಗಾರ

0

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ ಕಾಮ್ಸ್ ಮಂಗಳೂರು, ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ನಿಸರ್ಗ ಯುವಕ ಮಂಡಲ ಐನೆಕಿದು ಇವರ ಸಹಯೋಗದೊಂದಿಗೆ ತೋಟಗಾರಿಕಾ ಬೆಳೆಗಳ ಕೊಯ್ಲುತರ ನಿರ್ವಹಣೆ ಮತ್ತು ಸಂಸ್ಕರಣೆ ಹಾಗೂ ತರಕಾರಿ ಕೈ ತೋಟ ಕೃಷಿ ಮಾಹಿತಿ ಕಾರ್ಯಾಗಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿನ ಕುಮಾರಧಾರ ಸಭಾಂಗಣದಲ್ಲಿ ಜ.30 ರಂದು ಜರಗಿತು. ಕಾರ್ಯಾಗಾರ ಉದ್ಘಾಟಿಸಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಉಪಾಧ್ಯಕ್ಷರಾದ ಶ್ರೀಮತಿ ವಿನಯಾರಾ ನಡೆಯವರು ಮಾತನಾಡುತ್ತಾ ಹಾಪ್ಕಾಮ್ಸ್ ರೈತರಿಂದ ಉತ್ತಮ ಬೆಲೆಗೆ ಖರೀದಿಸಿದ ಹಣ್ಣು ಹಂಪಲು ಹಾಗೂ ತರಕಾರಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು ನಿಗದಿತ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದರೊಂದಿಗೆ ರೈತರ ಕೃಷಿ ಕೆಲಸಗಳಿಗೆ ಅನುಕೂಲವಾಗುವಂತೆ ತಳ್ಳುಗಾಡಿ ಹಾಗೂ ಪ್ಲಾಸ್ಟಿಕ್ ಕ್ರಿಯೇಟ್ ಗಳನ್ನು 50 %ಸಬ್ಸಿಡಿಯಲ್ಲಿ ನೀಡಲಾಗುತ್ತದೆ ಎಂದು ನುಡಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತ ಗುಂಡಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಪ್ಕಾಮ್ಸ್ ನಿರ್ದೇಶಕ ಹಾಗೂ ಸುಬ್ರಹ್ಮಣ್ಯ ಐನೆಕ್ಕಿದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು, ಜಿಲ್ಲಾ ಮಹಿಳಾ ಆಪರೇಟಿವ್ ಬ್ಯಾಂಕ್ ನಿರ್ದೇಶಕಿ ಶೋಭಾ ನಲ್ಲೂರಾಯ, ಸುಳ್ಯ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕರಾದ ಮಾಧವ ಡಿ ಹಾಗೂ ಸುಳ್ಯ ತೋಟಗಾರಿಕಾ ಅಧಿಕಾರಿ ಮದುಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಜಿಲ್ಲಾ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಕೆ ಪ್ರವೀಣ್ ರೈತರಿಗೆ ಸೂಕ್ತವಾದ ಮಾಹಿತಿಗಳನ್ನ ವಿವರವಾಗಿ ನೀಡಿದರು. ಸುಬ್ರಹ್ಮಣ್ಯ ಕೃಷಿಪತ್ತಿನ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕಟ್ಟೆಮನೆ ಸ್ವಾಗತಿಸಿದರು. ಉಪಾಧ್ಯಕ್ಷ ಮಾಧವ ಡಿ ವಂದಿಸಿದರು ಇದೇ ಸಂದರ್ಭದಲ್ಲಿ ದೋಣಿಮಕ್ಕಿ ಮೋಹನ್ದಾಸ್ ರೈ, ಹಾಗೂ ಮೋಹಿನಿ ದೇವರಗದ್ದೆ, ಅವರಿಗೆ ತಳ್ಳುಗಾಡಿಗಳನ್ನು ನೀಡಲಾಯಿತು. ಅಲ್ಲದೆ ಸುಮಾರು 20ಕ್ಕೂ ಮಿಕ್ಕಿ ರೈತರಿಗೆ ಪ್ಲಾಸ್ಟಿಕ್ ಕ್ರಿಯೇಟ್ ಗಳನ್ನು ವಿತರಿಸಲಾಯಿತು. ಎಲ್ಲಾ ಕೃಷಿ ಉಪಕರಣಗಳಿಗೆ ಶೇಕಡ 50 ಸಬ್ಸಿಡಿ ದರದಲ್ಲಿ ನೀಡಲಾಗಿದೆ.