ಎಣ್ಮೂರು ಮುಸ್ಲಿಂ ಯುವಜನ ಸಂಘದ ವತಿಯಿಂದ ಅನುಸ್ಮರಣಾ ಹಾಗೂ ಬಡ ಹೆಣ್ಣುಮಗಳ ವಿವಾಹ ಕಾರ್ಯಕ್ರಮ

0

ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಅಧೀನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಯುವ ಸಂಘಟನೆಯಾದ ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ವತಿಯಿಂದ ಬಹು!ತಾಜುಲ್ ಉಲಮಾ, ಬಹು!ಶಂಸುಲ್ ಉಲಮಾ ಹಾಗೂ ಅಗಲಿದ ಇನ್ನಿತರ ಉಲಮಾಗಳ ಅನುಸ್ಮರಣಾ ಹಾಗೂ ಜಮಾಅತ್ ನ ಬಡ ಹೆಣ್ಣುಮಗಳೋರ್ವಳ ವಿವಾಹ ಕಾರ್ಯಕ್ರಮ ಇತ್ತೀಚೆಗೆ ರಹ್ಮಾನಿಯ ಕೇಂದ್ರ ಜುಮ್ಮಾ ಮಸೀದಿಯ ಸಫಾ ಅಡಿಟೋರಿಯಂನಲ್ಲಿ ನಡೆಯಿತು.

ಅನುಸ್ಮರಣಾ ಕಾರ್ಯಕ್ರಮವನ್ನು ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇಲ್ಲಿನ ಖತೀಬರಾದ ಅಲ್ ಹಾಜ್ ಅಬ್ದುಲ್ಲ ಮದನಿ ಯವರು ಉದ್ಘಾಟಿಸಿದರು. ರಿಫಾಯಿಯ್ಯ ಜುಮ್ಮಾ ಮಸ್ಜಿದ್ ಎಣ್ಮೂರು ಮುಚ್ಚಿಲ ಇಲ್ಲಿನ ಮುದರ್ರಿಸ್ ಬಹು! ಅಬ್ದುಲ್ ಹಮೀದ್ ಅಹ್ಸನಿ ಅಲ್ ಅಫ್ಳಳಿ ಇವರು ಅನುಸ್ಮರಣಾ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇಲ್ಲಿನ ಅಧ್ಯಕ್ಷರಾದ ಜನಾಬ್ ಟಿ.ಎಸ್.ಸುಲೈಮಾನ್, ಬದ್ರಿಯಾ ಜುಮ್ಮಾ ಮಸ್ಜಿದ್ ಅತ್ತಿಕರಮಜಲು ಇಲ್ಲಿನ ಅಧ್ಯಕ್ಷರಾದ ಹಾಜಿ. ಪಿ. ಇಸಾಕ್ ಸಾಹೇಬ್ ಪಾಜಪಳ್ಳ, ಬದ್ರಿಯಾ ಜುಮ್ಮಾ ಮಸ್ಜಿದ್ ಕಜೆ-ನಿಂತಿಕ್ಕಲ್ ಇಲ್ಲಿನ ಅಧ್ಯಕ್ಷರಾದ ಜನಾಬ್. ಅಬ್ದುಲ್ ಗಫೂರ್ ಕಲ್ಮಡ್ಕ, ಮುನವ್ವಿರುಲ್ ಇಸ್ಲಾಂ ಮದರಸ ಮುಚ್ಚಿಲ ಇಲ್ಲಿನ ಸದರ್ ಮುಅಲ್ಲಿಂ ಬಹು. ಅಬ್ದುಲ್ ರಝಾಕ್ ಹಿಮಾಮಿ, ಮುಅಲ್ಲಿಂಗಳಾದ ಬಹು. ಅಬೂಬಕ್ಕರ್ ಸಅದಿ, ಬಹು. ಅಬ್ದುಲ್ ಅಝೀಝ್ ಮುಸ್ಲಿಯಾರ್, ರಹ್ಮಾನಿಯ ಕೇಂದ್ರ ಜುಮ್ಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇಲ್ಲಿನ ಮುಅದ್ಸಿನ್ ಬಹು. ಶಂಸುದ್ದೀನ್ ಫಾರೂಕಿ ಇವರು ಉಪಸ್ಥಿತರಿದ್ದರು.

ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ಅಧ್ಯಕ್ಷರಾದ ರಫೀಕ್ ಐವತ್ತೊಕ್ಲು ರವರು ಸ್ವಾಗತಿಸಿ, ಕಾರ್ಯದರ್ಶಿ ಇಸ್ಮಾಯಿಲ್ ಗೋಲ್ಡ್ ಇವರು ಧನ್ಯವಾದವಿತ್ತರು.

ಬಡ ಹೆಣ್ಣುಮಗಳ ವಿವಾಹ: ಕಳೆದ 5 ವರುಷಗಳಿಂದ ಜಮಾಅತ್ ನ ವ್ಯಾಪ್ತಿಯಲ್ಲಿರುವ ಅನಾಥ ಅಥವಾ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ವತಿಯಿಂದ ನಡೆಸಿಕೊಂಡು ಬರುತ್ತಿದ್ದು ಈ ವರುಷವೂ ಜಮಾಅತ್ ನ ಬಡ ಹೆಣ್ಣುಮಗಳೋರ್ವಳ ವಿವಾಹವನ್ನು ನಡೆಸಿಕೊಡಲಾಯಿತು.