ಮರ್ಕಂಜ : ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

0


ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮರ್ಕಂಜದ ನಿವಾಸಿ ಕುಸುಮಾಧರ ಮುಂಡೋಡಿ ಎಂಬವರ ಮೃತದೇಹ ಅರಂತೋಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕುಸುಮಾಧರರು ಅರಂತೋಡಿನಲ್ಲಿ ವಾಸವಾಗಿದ್ರು. ಎರಡು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಇಂದು ಅವರು ವಾಸವಿದ್ದ ಮನೆಯ ಪಕ್ಕದ ತೋಟದಲ್ಲಿ ಕೊಕ್ಕೋ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.