ಕೋಲ್ಚಾರು ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಂಕಟ್ಟು ಮಹೋತ್ಸವ

0

ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ- ಸೂಟೆ ಸಮರ್ಪಣೆ

ಕೋಲ್ಚಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದಂದು ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶವಾಯಿತು.

ವಿಶೇಷವಾಗಿ ದೈವಂಕಟ್ಟು ಮಹೋತ್ಸವದ ಸಂದರ್ಭದಲ್ಲಿ ದೈವಕ್ಕೆ ಸೂಟೆ ಸಮರ್ಪಣೆಯಾಯಿತು.

ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಕೋಲ್ಚಾರು ಕುಟುಂಬದ ಹಿರಿಯರು ಮತ್ತು ಕುಟುಂಬಸ್ಥರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದು ದೈವದ ಉತ್ಸವದ ಸಂಭ್ರಮ ಕಣ್ತುಂಬಿಕೊಂಡರು.

ಆಗಮಿಸಿದ ಭಕ್ತಾದಿಗಳಿಗೆ ಪ್ರಾತ:ಕಾಲದಿಂದ ನಿರಂತರ ಅನ್ನ ಪ್ರಸಾದ ವಿತರಿಸಲಾಯಿತು.