ಕೋಲ್ಚಾರು ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ- ವಿಷ್ಣುಮೂರ್ತಿ ದೈವದ ನರ್ತನ ಸೇವೆ

0

ಕೋಲ್ಚಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆಯು ನಡೆಯಿತು.

ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು ಹಾಗೂ ಕೋಲ್ಚಾರು ಕುಟುಂಬದ ಹಿರಿಯರು ಮತ್ತು ಕುಟುಂಬಸ್ಥರು, ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ದೈವದ ನರ್ತನ ಸೇವೆ ಕಣ್ತುಂಬಿಕೊಂಡರು. ರಾಜ್ಯ ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿದ್ದರು.