ಬಹು ನಿರೀಕ್ಷಿತ ಮೊಗ್ರ ಸೇತುವೆ ಕಾಮಗಾರಿ ಪ್ರಗತಿಯಲ್ಲಿ

0

ಗುತ್ತಿಗಾರು ಗ್ರಾಮದ ಬಹು ಬೇಡಿಕೆಯ ಮೊಗ್ರ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ.

ಮಾಜಿ ಸಚಿವ ಎಸ್ ಅಂಗಾರ ಅವರು 1.5 ಕೋಟಿ ಅನುದಾನ ಒದಗಿಸಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಚುನಾವಣಾ ಹಿನ್ನೆಲೆ ಹಾಗೂ ಮೊಗ್ರ ಜಾತ್ರೆಯ ಹಿನ್ನೆಲೆಯಲ್ಲಿ ಕಾಮಗಾರಿ ಅಲ್ಪ ತಡವಾಗಿ ಆರಂಭಿಸಲಾಗಿತ್ತು. ಈಗ ಕೆಲಸ ಪ್ರಗತಿಯಲ್ಲಿದ್ದು ಬಹು ಬೇಡಿಕೆಯ ಹಾಗೂ ಚುನಾವಣಾ ಸಂದರ್ಭ ಚರ್ಚೆಯ ಮುನ್ನೆಲೆಗೆ ಬರುತಿದ್ದ ಕೆಲಸ ಇದಾಗಿದ್ದು, ಸೇತುವೆ ಈ ಮಳೆಗಾಲಕ್ಕೆ ಪ್ರಯೋಜನಕ್ಕೆ ಬೀಳಲಿದೆ.