ಬೆಳ್ಳಾರೆ : ಸ್ಕೂಟಿಗಳ ಪರಸ್ಪರ ಡಿಕ್ಕಿ – ಗಾಯ

0

ಬೆಳ್ಳಾರೆ ಬಸ್ ನಿಲ್ದಾಣದ ಸಮೀಪ ಆಕ್ಟಿವಾ ಹಾಗೂ ಡ್ಯುಯೆಟ್ ಡಿಕ್ಕಿ ಹೊಡೆದುಕೊಂಡು ಸವಾರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಮೇ.26 ರಂದು ನಡೆದಿದೆ.
ಸವಾರ ಸೆಲ್ವರಾಜ್ ಎಂಬವರಿಗೆ ಕೈ ಕಾಲು ಹಾಗೂ ಮುಖದ ಭಾಗಕ್ಕೆ ಗಾಯವಾಗಿದ್ದು ಅವರು ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.