*ಬಳ್ಪ ಶಾಲೆಯಲ್ಲಿ ವಿಶ್ವ ಪರಿಸರ ದಿನ ಮತ್ತು ಸಸಿ ವಿತರಣೆ ಕಾರ್ಯಕ್ರಮ

0

ಅರಣ್ಯ ಸಮಿತಿ ವತಿಯಿಂದ ಉಚಿತ ಕಂಪ್ಯೂಟರ್ ಕೊಡುಗೆ

ಬಳ್ಪ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನ ಹಾಗೂ ಉಚಿತ ಕಂಪ್ಯೂಟರ್ ಕೊಡುಗೆ ಕಾರ್ಯಕ್ರಮ ಜೂ.5 ರಂದು ಜರುಗಿತು.


ಸಭಾ ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಬುಡಂಗಿ ಹಾಗೂ ಬಳ್ಪ ಅರಣ್ಯ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಮತ್ತು ಉಪ ವಲಯ ಅರಣ್ಯಾಧಿಕಾರಿ ಕೆ. ಸಂತೋಷ್ ರೈ ,ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಅಚ್ಯುತ್ತ ಗೌಡ ಆಲ್ಕಬೆ ,ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಾ ಕೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು, ಶಾಲಾ‌ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಭವ್ಯ, ಅರಣ್ಯ ರಕ್ಷಕ ದಿನೇಶ್ ಉಪಸ್ಥಿತರಿದ್ದು ವಿಶ್ವ ಪರಿಸರ ದಿನದ ಅಂಗವಾಗಿ ಅರಣ್ಯ ಇಲಾಖೆಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

ಬಳ್ಪ ಅರಣ್ಯ ಸಮಿತಿ ವತಿಯಿಂದ ಶಾಲೆಗೆ ಉಚಿತವಾಗಿ 50,000 ಬೆಲೆ ಬಾಳುವ ಕಂಪ್ಯೂಟರ್ ನ್ನು ಕೊಡುಗೆಯಾಗಿ ನೀಡಲಾಯಿತು ಕಾರ್ಯಕ್ರಮದ ನಂತರ ಪೋಷಕರು ಶಾಲಾ ಆವರಣ ಹಾಗೂ ಶಾಲಾ ಸಭಾಭವನವನ್ನು ಸ್ವಚ್ಛಗೊಳಿಸುವುದರ ಮೂಲಕ ಅರ್ಥಪೂರ್ಣವಾದ ಪರಿಸರ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ ಶಿಕ್ಷಕ ಆನಂದ್ ವೈ ಈ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗಿರಿಜಾ ಕೆ ಸ್ವಾಗತಿಸಿದರು ದೈಹಿಕ ಶಿಕ್ಷಕಿ ಶ್ರೀಮತಿ ಭಾಗಿರಥಿ ಎನ್ ವಂದಿಸಿದರು.