ಕಲ್ಲುಗುಂಡಿಯಲ್ಲಿ ಸ್ಕೂಟಿ-ಪಿಕಪ್ ಮಧ್ಯೆ ಭೀಕರ ಅಪಘಾತ – ಪವಾಡ ಸದೃಶದಲ್ಲಿ ಪಾರಾದ ಯುವಕ

0

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಲ್ಲುಗುಂಡಿ ಪೇಟೆಯಲ್ಲಿ ಸ್ಕೂಟಿ ಹಾಗೂ ಪಿಕಪ್ ನಡುವೆ ಮುಖಾಮುಖಿ ಭೀಕರ ಅಪಘಾತ ನಡೆದು ಸ್ಕೂಟಿ ಸವಾರ ಪವಾಡ ಸದೃಶದಲ್ಲಿ ಪಾರಾದ ಘಟನೆ ಜೂ. 15ರಂದು ಅಪರಾಹ್ನ ಸಂಭವಿಸಿದೆ.

ಸ್ಕೂಟಿ ಸವಾರ ಕಲ್ಲುಗುಂಡಿಯಲ್ಲಿ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಸ್ಕೂಟಿಗೆ ಪೆಟ್ರೋಲ್ ಹಾಕಲೆಂದು ಕಲ್ಲುಗುಂಡಿ ಪೆಟ್ರೋಲ್ ಬಂಕ್ ಗೆ ಬಂದು ಮರಳಿ ಹೋಗುತ್ತಿದ್ದ ಸಂದರ್ಭ ಸಂಪಾಜೆ ಕಡೆಯಿಂದ ಪುತ್ತೂರಿಗೆ ಹೋಗುತ್ತಿದ್ದ ಪಿಕಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅಪಘಾತದ ಭೀಕರ ದೃಶ್ಯ ಕಂಡಾಗ ಮೈ ಜುಮ್ಮೆನಿಸುವಂತಿದೆ.


ಘಟನೆಯಲ್ಲಿ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿದ್ದು, ರಸ್ತೆಗೆ ಬಿದ್ದು ಸುಮಾರು 50 ಮೀಟರ್ ದೂರ ಸ್ಕೂಟಿ ಮತ್ತು ಯುವಕ ಉರುಳಿಕೊಂಡು ಬರುವ ದೃಶ್ಯ ಸಮೀಪದ ಅಂಗಡಿಯ ಸಿ‌.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವಕ ಪವಾಡ ಸದೃಶ ಪಾರಾಗಿದ್ದು , ಸ್ಕೂಟಿ ಸವಾರನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ.


ಸ್ಥಳಕ್ಕೆ ಕಲ್ಲುಗುಂಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.