ಅರಂಬೂರು ಬಳಿ ಜೀಪು – ಬೈಕ್ ನಡುವೆ ಡಿಕ್ಕಿ

0

ಕಾಲೇಜು ವಿದ್ಯಾರ್ಥಿಗಳಾದ ಬೈಕ್ ಸವಾರರಿಬ್ಬರೂ ಗಂಭೀರ

ಸುಳ್ಯದ ಅರಂಬೂರ್ ಬಳಿ ಜೀಪ್ ಮತ್ತು ಬೈಕು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಇದೀಗ ವರದಿಯಾಗಿದೆ.

ಪೆರಾಜೆ ಮೂಲದವರ ಜೀಪ್ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಸುಳ್ಯದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಸುಳ್ಯದಿಂದ ಪೆರಾಜೆ ಕಡೆಗೆ ಹೋಗುತ್ತಿದ್ದ ಸಂದರ್ಭ ಮುಖಾಮುಖಿ ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.