ಸುಳ್ಯ ಎಸ್‌ಐ ಆಗಿ ಈರಯ್ಯ ದೂಂತೂರು ಅಧಿಕಾರ ಸ್ವೀಕಾರ

0



ಸುಳ್ಯ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಆಗಿ ಕುಂದಾಪುರದಿಂದ ವರ್ಗಾವಣೆಗೊಂಡು ಬಂದಿರುವ ಈರಯ್ಯ ದೂಂತೂರು ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಮಧ್ಯಾಹ್ನ ಎಸ್‌ಐ ದಿಲೀಪ್ ಜಿ.ಆರ್.ರಿಂದ ಅವರು ಅಧಿಕಾರ ವಹಿಸಿಕೊಂಡರು.


ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯಾಗಿ ಹೆಸರು ಗಳಿಸಿಕೊಂಡಿರುವ ಈರಯ್ಯರವರು ಈ ಹಿಂದೆ ಬೆಳ್ಳಾರೆ ಠಾಣೆಯಲ್ಲಿ ಎಸ್‌ಐ ಆಗಿದ್ದು, ಆ ಬಳಿಕ ಉಪ್ಪಿನಂಗಡಿ, ಶಿರಸಿ ಠಾಣೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದರು.