ಜೂ.29 ರಂದು ಈದುಲ್ ಅಝ್ ಹಾ (ಬಕ್ರಿದ್ ಹಬ್ಬ)

0

ಅದಿತ್ಯವಾರ ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವಾದ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ದುಲ್ಹಜ್ 1 ಮಂಗಳವಾರ (ಜೂ.20ರಂದು) ಆಗಿರುತ್ತದೆ. ಆದ್ದರಿಂದ ಜೂ.29 (ಗುರುವಾರ)ರಂದು ಈದುಲ್ ಅಝ್ ಹಾ ಆಚರಿಸಲಾಗುವುದು ಎಂದು ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಮಂಗಳೂರು ಖಾಝಿ ತ್ವಾ ಖಾ ಅಹಮದ್ ಮುಸ್ಲಿಯಾರ್ ತಿಳಿಸಿದ್ದಾರೆ.