ಕಝ್ ಮಿಯಾವಾಕಿ ಅರಣ್ಯವನ್ನು ಮನ್ ಕೀ ಬಾತ್ ಹಾಗೂ ಟ್ವೀಟರ್ ನಲ್ಲಿ ಪ್ರಶಂಸಿಸಿದ ಪ್ರಧಾನಿ ಮೋದಿ

0

ಮಿಯಾವಕಿ ಅರಣ್ಯದ ಮೂಲಕ ಗ್ರೀನ್ ಹೀರೋ ಆಫ್ ಇಂಡಿಯಾ ಗೌರವಕ್ಕೆ ಪಾತ್ರರಾದವರು ಸುಳ್ಯದ ಡಾ. ಆರ್. ಕೆ. ನಾಯರ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತನ್ನ ಮನ್ ಕೀ ಬಾತ್ ನಲ್ಲಿ ಈ ಬಾರಿ ಮಿಯಾವಕಿ ಅರಣ್ಯದ ಕುರಿತು ಪ್ರಸ್ತಾಪಿಸಿದ್ದಾರೆ.

ಗುಜರಾತ್ ನ ಕಝ್ ನಲ್ಲಿ ಭೂ ಕಂಪ ಪೀಡಿತ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಮಿಯಾವಕಿ ಅರಣ್ಯದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ತನ್ನ ಟ್ವೀಟರ್ ಖಾತೆಯಲ್ಲೂ ಪ್ರಧಾನ ಮಂತ್ರಿಯವರು ಮಿಯಾವಾಕಿ ಅರಣ್ಯದ ಕುರಿತು ಪ್ರಸ್ತಾಪಿಸಿದ್ದು ಪರಿಸರ ಸಂವರ್ಧನೆ ಮಿಯಾವಾಕಿ ಅರಣ್ಯ ನಿರ್ಮಾಣ ಅಗತ್ಯತೆಯ ಕುರಿತು ಉಲ್ಲೇಖಿಸಿ ಗುಜರಾತ್ ಸಹಿತ ಹಲವು ರಾಜ್ಯಗಳನ್ನು ಉಲ್ಲೇಖಿಸಿದ್ದಾರೆ.

ಭಾರತದಲ್ಲಿ ಮಿಯಾವಾಕಿ ಅರಣ್ಯ ನಿರ್ಮಾಣದ ಮೂಲಕ ಗ್ರೀನ್ ಹೀರೋ ಆಫ್ ಇಂಡಿಯಾ ಗೌರವಕ್ಕೆ ಭಾಜನರಾಗಿರುವ ಸುಳ್ಯದ ಡಾ. ಆರ್. ಕೆ. ನಾಯರ್ ಅವರೇ ಕಛ್ ನ ಸ್ಮೃತಿ ವನ್ ನ ರೂವಾರಿ ಕೂಡಾ ಆಗಿದ್ದಾರೆ.