ತಂಬಿನಮಕ್ಕಿ : ದಾರುಲ್ ಹುದಾ ವಿದ್ಯಾರ್ಥಿ ಸಂಘಟನೆ ಮಂಶಉಲ್ ಬಯಾನ್ ಸ್ಟೂಡೆಂಟ್ಸ್ ಯೂನಿಯನ್ ಸಮಿತಿ ರಚನೆ

0

ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾರ್ಥಿ ಸಂಘಟನೆ ಮಂಶಉಲ್ ಬಯಾನ್ ಸ್ಟೂಡೆಂಟ್ಸ್ ಯೂನಿಯನ್ ಇದರ 2023-24 ನೇ ಸಾಲಿನ ಸಮಿತಿಯನ್ನು ಜೂ 18 ರಂದು ರಚಿಸಲಾಯಿತು.

ದಾರುಲ್ ಹುದಾ ಸಂಸ್ಥೆಯ ಜನರಲ್ ಮೆನೇಜರ್ ಖಲೀಲ್ ಹಿಮಮಿ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಖಲಂದರ್ ಹಿಮಮಿ ಸಖಾಫಿ ಉದ್ಘಾಟಿಸಿದರು.

ಅಧ್ಯಾಪಕರುಗಳಾದ ಮುಕ್ತಾರ್ ಹಿಮಮಿ ಸಖಾಫಿ,ಕಬೀರ್ ಹಿಮಮಿ ಸಖಾಫಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಬಳಿಕ 2023-24 ನೇ ಸಾಲಿನ ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಸಾಬಿತ್ ನಿಂತಿಕಲ್ಲು ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಕೊಡಗು, ಕೋಶಾಧಿಕಾರಿ ಅಮೀನ್ ಕಕ್ಕಿಂಜೆ ರವರನ್ನು ಆಯ್ಕೆಮಾಡಲಾಯಿತು. ಸಾಬಿತ್ ನಿಂತಿಕಲ್ಲು ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಆಸಿಫ್ ಕೊಡಗು ವಂದಿಸಿದರು.