ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ರಕ್ಷಾ-ಸ್ವರ್ಣಾಮೃತ ಪ್ರಾಶನ ಕಾರ್ಯಕ್ರಮ

0

ಸತತ 30 ವರ್ಷಗಳಿಂದ ಜನರಿಗೆ ಆಯುರ್ವೇದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿರುವ ಸಂಸ್ಥೆ

ರಕ್ಷಾ ಆಯುರ್ವೇದ ಆಸ್ಪತ್ರೆಯಲ್ಲಿ ರಕ್ಷಾ ಆಯುರ್ವೇದ ವಿಶೇಷವಾಗಿ ಸಿದ್ಧಪಡಿಸುವ ಸ್ವರ್ಣಪ್ರಾಶನ ಕಾರ್ಯಕ್ರಮ ಜೂ.21 ರಂದು ಯಶಸ್ವಿಯಾಗಿ ನಡೆಯಿತು.
ರಕ್ಷಾ ಆಯುರ್ವೇದ ಶಾಖೆಗಳಲ್ಲಿ ಮಕ್ಕಳ ರೋಗನಿರೋಧಕ ಶಕ್ತಿ, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾದ ಸ್ವರ್ಣಾಮೃತ ಪ್ರಾಶನ ನೀಡಲಾಗುತ್ತಿದ್ದು, 16ವರ್ಷದೊಳಗಿನ 60ಕ್ಕೂ ಅಧಿಕ ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡರು.


ಔಷಧಿಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ತಾವೇ ಸಂಗ್ರಹಿಸಿದ ಗಿಡಮೂಲಿಕೆಗಳಿಂದ
ಶಾಸ್ತ್ರವೊತ್ತರವಾಗಿ ಸ್ವರ್ಣಪ್ರಾಶನವನ್ನು ತಯಾರಿಸಲಾಗುತ್ತಿದೆ.


ಎರಡನೇ ತಲೆಮಾರಿನ ವೈದ್ಯರುಗಳಾದ ಡಾ.ಅವಿನಾಶ್ ಶಾಂತಿಮೂಲೆ, ಡಾ.ಜಯಶ್ರೀ ಭಟ್ ಹಾಗೂ ಸಂಸ್ಥೆಯ ಸಂಸ್ಥಾಪಕರು ಹಾಗೂ ಹಿರಿಯ ವೈದ್ಯರಾದ ಡಾ.ತಿರುಮಲೇಶ್ವರ ಭಟ್‌ರವರು ಮಕ್ಕಳಿಗೆ ಸ್ವರ್ಣಾಪ್ರಾಶನವನ್ನು ನೀಡಿದರು.


ಹಾಗೂ ಈ ಸಂದರ್ಭದಲ್ಲಿ ಪ್ರತೀ ತಿಂಗಳು ಪುಷ್ಯಾನಕ್ಷತ್ರದ ದಿನದಂದು ಸ್ವರ್ಣಾಪ್ರಾಶನವನ್ನು ನೀಡಲಾಗುವುದೆಂದು ತಿಳಿಸಿದರು.
ರಕ್ಷಾ ಆಯುರ್ವೇದ ಸಂಸ್ಥೆಯು 1990 ರಿಂದ ನಿರಂತರವಾಗಿ ಸುಳ್ಯ ಹಾಗೂ ಸುತ್ತಮುತ್ತಲಿನ ಹಲವಾರು ಜಿಲ್ಲೆಗಳ ಜನರಿಗೆ ಆಯುರ್ವೇದ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದೆ.