ಬೊಳು ಬೈಲು ಸಮೀಪ ಕಾರು ಮತ್ತು ಪಿಕಪ್ ಡಿಕ್ಕಿ

0

ವಾಹನಗಳು ಜಖಂ- ಸವಾರರು ಅಪಾಯದಿಂದ ಪಾರು*

 

ಸುಳ್ಯದ ಬೊಳುಬೈಲು ಸಮೀಪ ಮಾಣಿ ಮೈಸೂರು ಹೆದ್ದಾರಿಯಲ್ಲಿ ಪಿಕಪ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂ ಗೊಂಡ ಘಟನೆ ಜೂನ್ 22 ರಂದು ರಾತ್ರಿ ವರದಿಯಾಗಿದೆ.

ಸುಳ್ಯದಿಂದ ಪುತ್ತೂರಿನತ್ತ ಹೋಗುತ್ತಿದ್ದ ಪಿಕಪ್ ವಾಹನ ಹಾಗೂ ಪುತ್ತೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.