ದಾಸರಬೈಲು ಅಂಗನವಾಡಿ ಸಹಾಯಕಿ ಶ್ರೀಮತಿ ಪದ್ಮಾವತಿಯವರಿಗೆ ಬೀಳ್ಕೊಡುಗೆ

0

ದ.ಕ.ಜಿ.ಪಂ. ಅಂಗನವಾಡಿ ಕೇಂದ್ರ ದಾಸರಬೈಲು, ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ, ಸ್ತ್ರೀಶಕ್ತಿ ಸಂಘ ದಾಸರಬೈಲು ಮರ್ಕಂಜ ಇದರ ಜಂಟಿ‌ ಆಶ್ರಯದಲ್ಲಿ ದಾಸರಬೈಲು ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯದಲ್ಲಿದ್ದು, ನಿವೃತ್ತಿಯಾದ ಶ್ರೀಮತಿ ಪದ್ಮಾವತಿಯವರಿಗೆ ಬೀಳ್ಕೊಡುಗೆ ಸಮಾರಂಭವು ಜೂ.22ರಂದು ಸ.ಕಿ.ಪ್ರಾ.ಶಾಲೆ ದಾಸರಬೈಲಿನಲ್ಲಿ ನಡೆಯಿತು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ರಮತ ಕೆ.ಟಿ. ಅಧ್ಯಕ್ಷತೆ ವಹಿಸಿದ್ದರು.


ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪವಿತ್ರ ಗುಂಡಿ, ಸದಸ್ಯೆ ಶ್ರೀಮತಿ ಗೀತಾ ಹೊಸೊಳಿಕೆ, ಸದಸ್ಯ ಚಿತ್ತರಂಜನ್ ಕೋಡಿ ಗೌರವ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅರಂತೋಡು ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ನಿವೃತ್ತರಾದ ಪದ್ಮಾವತಿ ದಂಪತಿಗಳನ್ನು ಸನ್ಮಾನಿಸಿದರು.
ಎಸ್ ಡಿಎಂಸಿ ಅಧ್ಯಕ್ಷ ಪದ್ಮನಾಭ ಎನ್.ವಿ., ಸ್ತ್ರೀ ಶಕ್ತಿ ಅಧ್ಯಕ್ಷೆ ಶ್ರೀಮತಿ ಸೀಮಾ ಕೆ.ಜಿ. ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕುಸುಮ ಆರ್., ದಾಸರಬೈಲು ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶುಭ ಪಿ.ಜಿ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚರಣ್ ರಾಜ್ ಅಡ್ಕಬಳೆ ಹಾಗೂ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.