p>

ವಿಟ್ಲದಲ್ಲಿ ರಿಕ್ಷಾ ಪಲ್ಟಿ

0

ಪಂಬೆತ್ತಾಡಿಯ ವ್ಯಕ್ತಿ ಮೃತ್ಯು

ವಿಟ್ಲದಲ್ಲಿ ರಿಕ್ಷಾ ಪಲ್ಟಿ -ಪಂಬೆತ್ತಾಡಿಯ ವ್ಯಕ್ತಿ ಮೃತ್ಯು

ವಿಟ್ಲದ ಪಕಳಕುಂಜ ಸಮೀಪ ಜೂ.26ರಂದು ರಾತ್ರಿ ರಿಕ್ಷಾ ಪಲ್ಟಿಯಾಗಿ ಪಂಬೆತ್ತಾಡಿಯ ವ್ಯಕ್ತಿ ಮೃತ ಪಟ್ಟಿರುವ ಘಟನೆ ವರದಿಯಾಗಿದೆ.
ಪಂಬೆತ್ತಾಡಿ ಗ್ರಾಮದ ಚೀಮುಳ್ಳು ಮತ್ತಡಿ ಮತ್ತು ಐತೆ ದಂಪತಿಗಳ ಪುತ್ರ ಸುದರ್ಶನ್ (34ವ) ಮೃತ ಪಟ್ಟವರು.


ಅವರು ಜೂ.26 ರಂದು ರಾತ್ರಿ ವಿಟ್ಲ ಮಾಣಿಲದ ಬಾವಲಿಮೂಲೆ ಕಡೆ ಅವರ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ರಿಕ್ಷಾ ಪಲ್ಟಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಮತ್ತೊಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ ದೇವಕಿ, ಪುತ್ರಿ ಚಂದ್ರಾವತಿ, ಇಬ್ಬರು ಸಹೋದರಿಯರು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.