ಪುತ್ತೂರಿನ ಕಲ್ಲರ್ಪೆಯಲ್ಲಿ ಪಿಕಪ್ ವಾಹನ ಹಾಗೂ ಬೈಕ್ ಅಪಘಾತ : ಜಟ್ಟಿಪಳ್ಳದ ವ್ಯಕ್ತಿ ಮೃತ್ಯು

0

ಪುತ್ತೂರಿನ ಕಲ್ಲರ್ಪೆಯಲ್ಲಿ ಮಧ್ಯಾಹ್ನ ಪಿಕಪ್ ವಾಹನ ಹಾಗೂ ಬೈಕ್ ಪರಸ್ಪರ ಢಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಸುಳ್ಯದ ಜಟ್ಟಿಪಳ್ಳ ನಿವಾಸಿ ನಾಗರಾಜ(53) ಎಂದು ತಿಳಿದು ಬಂದಿದೆ. ಮೃತದೇಹ ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.