ಸುಳ್ಯದಲ್ಲಿ ನೂತನ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಶುಭಾರಂಭ

0

ಸುಳ್ಯದ ವಿನಾಯಕ ಬಿಲ್ಡಿಂಗ್ ನ ಮೊದಲ ಮಹಡಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸ್ವರ್ಣಶ್ರೀ ಫೈನಾನ್ಸ್ ಇದೀಗ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯಾಗಿ ಬೆಳೆದು ಜೂ. 29ರಂದು ಶುಭಾರಂಭಗೊಂಡಿತು. ಬೆಳಿಗ್ಗೆ ಪ್ರವೀಣ್ ಭಟ್ ಗಣಹೋಮ ನೆರವೇರಿಸಿದರು. ಸುಳ್ಯ ವಲಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಸುಳ್ಯ ವೆಂ

ಕಟ್ರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ಅಭ್ಯಾಗತರಾಗಿ ಭಾಗವಹಿಸಿ ದೀಪ ಬೆಳಗಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಜನಾರ್ಧನ ಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಉಪಾಧ್ಯಕ್ಷ ಸತ್ಯನಾರಾಯಣ ಅಚ್ರಪ್ಪಾಡಿ, ರಾಘವ ಗೌಡ ಎಂ, ಪ್ರಕಾಶ್ ಕೆ, ಶ್ರೀಮತಿ ಭವಾನಿ ಬಿ.ಆರ್, ಶ್ರೀಮತಿ ಹರ್ಷಿತಾ ಎನ್.ಪಿ, ಸಚಿನ್ ಕುಮಾರ್ ಬಿ.ಎನ್, ಸತೀಶ್ ಕೆ.ಜಿ, ಮಹೇಶ್ ಎಂ.ಆರ್, ದೀಕ್ಷಿತ್ ಕುಮಾರ್ ಪಿ, ವೃತ್ತಿಪರ ನಿರ್ದೇಶಕರುಗಳಾದ ಆನಂದ ಖಂಡಿಗ ಕಾರ್ಯಕ್ರಮ ನಿರೂಪಿಸಿ ಡಾ. ಪುರುಷೋತ್ತಮ ಕೆ.ಜಿ ವಂದಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ಸಿಬ್ಬಂದಿ ಶ್ರೀಮತಿ ಲಿಖಿತಾ ಅತಿಥಿಗಳನ್ನು ಆಹ್ವಾನಿಸಿದರು. ಸಂಸ್ಥೆಯಲ್ಲಿ ಆಕರ್ಷಕ ಬಡ್ಡಿ ದರದಲ್ಲಿ ಠೇವಣಾತಿ ಸಂಗ್ರಹ ಮತ್ತು ಸಾಲ ಸೌಲಭ್ಯ ನೀಡಲಾಗುವುದು.

ನಿರಖು ಠೇವಣಿಗೆ ಒಂದು ವರ್ಷ ಮೇಲ್ಪಟ್ಟು 10%, ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ, ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭೂ ಅಡಮಾನ ಸಾಲ, ವೇತನ ಆಧಾರಿತ ಸಾಲ, ಭೂಮಿ ಖರೀದಿ ಸಾಲ, ಜಾಮೀನು ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಮನೆ ನಿವೇಶನ ಖರೀದಿ ಸಾಲ, ಮನೆ ನಿರ್ಮಾಣ ಸಾಲ ಸೇರಿದಂತೆ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಕ್ಲಪ್ತ ಸಮಯದಲ್ಲಿ ನೀಡಲಾಗುವುದೆಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ ತಿಳಿಸಿದ್ದಾರೆ.