ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ

0

ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ ಕೆ ವಿ ಚಿದಾನಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಭಾರತ ರತ್ನ ಡಾ. ಬಿ ಸಿ ರೋಯ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ’ಭಾರತದಾದ್ಯಂತ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿ.ಸಿ. ರಾಯ್ ರವರ ಹೆಸರಿನಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ದೇಶದ ಪ್ರಥಮ ಭಾರತ ರತ್ನ ಪ್ರಶಸ್ತಿ ಪಡೆದ ವೈದ್ಯರು ಇವರಾಗಿದ್ದಾರೆ.


ಡಾ. ಬಿಧನ್ ಚಂದ್ರ ರಾಯ್ , MRCP ಮತ್ತು FRCS
ಪದವಿಗಳನ್ನು ಪಡೆಯಲು ಸಾಕಷ್ಟು ಪ್ರತಿಭಾವಂತರಾದ ಕೆಲವೇ ಕೆಲವು ಜನರಲ್ಲಿ ಒಬ್ಬರಾಗಿದ್ದಾರೆ.ಒಬ್ಬ ಪ್ರಖ್ಯಾತ ವೈದ್ಯರಾಗಿದ್ದು ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಇವರು ಒಬ್ಬರು.ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.ಬಿಧನ್ ಚಂದ್ರ ರಾಯ್ ಅವರು ಅತ್ಯಂತ ಘಟನಾತ್ಮಕ ಜೀವನವನ್ನು ನಡೆಸಿದವರು.ಅವರು ಪಶ್ಚಿಮ ಬಂಗಾಳದ ಬಿಧಾನನಗರ ಮತ್ತು ಕಲ್ಯಾಣಿ ನಗರಗಳ ಅಡಿಗಲ್ಲು ಹಾಕಿದರು. ಕಲ್ಕತ್ತಾ ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಭಾಗವಾಗಿ ಮತ್ತು ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ ಅವರ ಪ್ರವರ್ಧಮಾನದ ಅವಧಿಯ ನಂತರ, ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ತರುವಾಯ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು, ಅವರು ತಮ್ಮ ಮರಣದವರೆಗೂ ಈ ಹುದ್ದೆಯನ್ನು ಹೊಂದಿದ್ದರು.

ಡಾ. ಬಿಧನ್ ಚಂದ್ರ ರಾಯ್ ಅವರು ಪ್ರತಿ ವರ್ಷ ಜುಲೈ ೧ ರಂದು (ಅವರ ಜನ್ಮ ಮತ್ತು ಮರಣದ ದಿನ) ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುವ ಮೂಲಕ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು. ಬಳಿಕ ತಮ್ಮ ಕಲಿಕಾ ಮತ್ತು ವೈದ್ಯ ವೃತ್ತಿ ಜೀವನದ ಬಗ್ಗೆ ಮಾತನಾಡಿ ಹಲವಾರು ಅನುಭವಗಳನ್ನು ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಬಯೋಕೆಮಿಸ್ಟ್ರಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಶೃತಿ ರಾಯ್ ಪಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮುಖ್ಯಸ್ಥೆ ಡಾ. ನೀಲಾಂಬರಿಕ ನಟರಾಜನ್, ಅಸಿಸ್ಟೆಂಟ್ ಪ್ರೊಫೆಸರ್ ಡಾ. ಪ್ರೀತಿ ರಾಜ್ ಬಳ್ಳಾಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರುಗಳು, ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕಿರಿಯವೈದ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದ ವೈದ್ಯರುಗಳಿಗೆ ಗುಲಾಬಿ ಹೂಗಳನ್ನು ನೀಡುವ ಮೂಲಕ ದಿನದ ಶುಭಾಶಯ ನೀಡಿದರು.

ಸಂಸ್ಥೆಯ ಮುಖ್ಯಸ್ಥೆ ಡಾ. ನೀಲಾಂಬಿಕ ನಟರಾಜನ್ ಸ್ವಾಗತಿಸಿ, ಅಸಿಸ್ಟೆಂಟ್ ಪ್ರೊಫೆಸರ್ ಪ್ರೀತಿ ರಾಜ್ ಬಲ್ಲಾಳ್ ವಂದಿಸಿದರು.
ಕಿರಿಯ ವೈದ್ಯರುಗಳಾದ ಜಾಸ್ಮಿನ್ ಹಾಗೂ ಲೇಖನ್ ಕಾರ್ಯಕ್ರಮ ನಿರೂಪಿಸಿದರು.