ಪಾಲ ದಾಟುತ್ತಿರುವ ವೇಳೆ ಕೂಲಿ ಕಾರ್ಮಿಕ ನೀರು ಪಾಲು
ಸ್ಥಳಕ್ಕೆ ಅಗ್ನಿ ಶಾಮಕ ದಳ, ಪೊಲೀಸರ ದೌಡು
ಧಾರಾಕಾರ ಸುರಿಯುತ್ತಿರುವ ಮಳೆಗೆ ಆಲೆಟ್ಟಿಯ ಕೂರ್ನಡ್ಕ ಬಳಿ ಅವಘಡವೊಂದು ವರದಿಯಾಗಿದೆ.
ಹೊಳೆಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.















ನೀರು ಪಾಲಾದ ವ್ಯಕ್ತಿ ಕೇರಳ ಮೂಲದವರು ಎಂದು ಸಂಶಯಿಸಲಾಗಿದ್ದು,
ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಸುಳ್ಯ ಅಗ್ನಿ ಶಾಮಕ ದಳದವರು ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.









