ಕನಕಮಜಲು ಗ್ರಾ.ಪಂ. ಗ್ರಂಥಾಲಯಕ್ಕೆ ನುಗ್ಗಿದ ಕಳ್ಳರು

0

ಗ್ರಾ.ಪಂ. ಬೀಗ ಮುರಿಯಲು ಯತ್ನ

ಕನಕಮಜಲು ಗ್ರಾಮ ಪಂಚಾಯತಿಯ ಗ್ರಂಥಾಲಯದ ಬಾಗಿಲು ಮುರಿದ ಕಳ್ಳರು ಗ್ರಾಮ ಪಂಚಾಯತಿಯ ಬೀಗ ಒಡೆಯಲು ಯತ್ನಿಸಿದ ಘಟನೆ ಜು.7ರಂದು ರಾತ್ರಿ ಸಂಭವಿಸಿದೆ.

ಕಳ್ಳರ ಗುಂಪು ರಾತ್ರಿ ವೇಳೆ ಗ್ರಾಮ ಪಂಚಾಯತಿ ಗ್ರಂಥಾಲಯದ ಬಾಗಿಲು ಒಡೆದಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರ ಕೊಠಡಿ ಹಾಗೂ ಕಛೇರಿಯ ಬೀಗ ಒಡೆಯಲು ವಿಫಲ ಯತ್ನ ನಡೆಸಿದ್ದು , ಬೀಗ ಮುರಿಯಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.


ಗ್ರಾಮ ಪಂಚಾಯತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿದೆಯಾದರೂ ರಾತ್ರಿ ವೇಳೆ ವಿದ್ಯುತ್ ಇರದ ಸಂದರ್ಭದಲ್ಲಿ ಕಳ್ಳರು ಬೀಗ ಒಡೆಯಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.


ಈ ಕುರಿತು ಗ್ರಾ.ಪಂ. ವತಿಯಿಂದ ಪೊಲೀಸ್ ದೂರು ನೀಡಿದ್ದು , ಜು.8ರಂದು ಬೀಟ್ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು, ಜು.10ರಂದು ಎ.ಎಸ್.ಐ. ನೇತೃತ್ವದ ಪೊಲೀಸ್ ತಂಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರೆಂದು ತಿಳಿದುಬಂದಿದೆ.