ಸುಳ್ಯ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಹಿಂಬದಿಯ ತಡೆಗೋಡೆ ಕುಸಿತ, ಶೌಚಾಲಯ ಕಟ್ಟಡಕ್ಕೆ ಅಲ್ಪಮಟ್ಟಿಗೆ ಹಾನಿ

0

ಸುಳ್ಯ ಜ್ಯೋತಿ ವೃತ್ತದ ಬಳಿ ಇರುವ ಕಿರಿಯ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದ ತಡೆಗೋಡೆಯ ಕಲ್ಲುಗಳು ಕುಸಿದು ಬಿದ್ದಿದ್ದು ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಅಲ್ಪ ಮಟ್ಟಿಗೆ ಹಾನಿ ಸಂಭವಿಸಿದೆ.


ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ಯಾವುದೇ ದುರ್ಘಟನೆ ಸಂಭವಿಸಿಲ್ಲ.
ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಈ ಭಾಗದ ಬರೆಯ ಮಣ್ಣುಗಳು ಅಲ್ಲಲ್ಲಿ ಸ್ವಲ್ಪ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಇಲ್ಲಿಗೆ ಶಾಶ್ವತ ತಡೆಗೋಡೆ ನಿರ್ಮಾಣ ವಾಗಬೇಕಾಗಿದೆ.


ಅಲ್ಲದೆ ಶಾಲಾ ಕಟ್ಟಡದ ಗೋಡೆಯೂ ಕೂಡ ಶಿಥಿಲವಾಗಿರುವುದು ಕಂಡು ಬರುತ್ತಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಈ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.