ಸುಬ್ರಹ್ಮಣ್ಯ: ಮನೆಗೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕಳ್ಳತನ ಪ್ರಕರಣ

0

ತಡ ರಾತ್ರಿ ಬೆರಳಚ್ಚು ತಜ್ಞರು, ಶ್ವಾನ ಆಗಮನವಾಗಿ ಪರಿಶೀಲನೆ

ಸುಬ್ರಹ್ಮಣ್ಯ ಪೊಲೀಸರಿಂದ ತನಿಖೆ ಆರಂಭ

ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ಬಳಿ ಮನೆಯೊಂದಕ್ಕೆ ನುಗ್ಗಿ ಚಿನ್ನ, ಬೆಳ್ಳಿ, ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.30 ರ ರಾತ್ರಿ ತಡ ರಾತ್ರಿ ಬೆರಳಚ್ಚು ತಜ್ಞರು, ಶ್ವಾನ ಆಗಮನವಾಗಿ ತನಿಖೆ ನಡೆಸಿದೆ.

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಕಳೆದ 15 ವರ್ಷಗಳಿಂದ ಕೃಷ್ಣರಾಜ್ ಎಂಬವರು ಅರ್ಚಕರಾಗಿ ಕೆಲಸ ನಿರ್ವಹಿಸುತಿದ್ದು ಮಠದ ಅಧೀನದ ಮನೆಯೊಂದು ಸದಾನಂದ ಆಸ್ಪತ್ರೆ ಬಳಿ ಇದ್ದು ಅದರಲ್ಲಿ ಕೃಷ್ಣರಾಜ್ ಭಟ್ ಅವರು ಕುಟುಂಬ ಸಮೇತ ವಾಸವಿದ್ದರು. ಮೂಲತಹ ಉಡುಪಿಯವರಾಗಿರುವ ಅವರು ಜು.27 ರಂದು ಕುಟುಂಬ ಸಮೇತ ಉಡುಪಿಗೆ ತೆರಳಿದ್ದು ಜು.30 ರಂದು ಸಂಜೆ ಸುಬ್ರಹ್ಮಣ್ಯಕ್ಕೆ ಮರಳಿದಾಗ ಮನೆಯಲ್ಲಿ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ.

ಮನೆ ಹಂಚು ತೆಗೆದು ಕಳ್ಳತನ:

ಮನೆಯ ಹಿಂಬದಿಯ ಮಾಡಿನ ಹಂಚು ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಮೂರು ಗೊದ್ರೇಜ್ ಒಡೆದು ತಡಕಾಡಿದ್ದರೆ, ಬಟ್ಟೆಗಳನ್ನು ಎಳೆದು ಹಾಕಿದ್ದಾರೆ.
ಗೊದ್ರೇಜ್ ಒಂದರಲ್ಲಿದ್ದ ಒಂದು ಚೈನ್, ಒಂದು ಬೆಂಡೋಲೆ, ಬೆಳ್ಳಿಯ ಕೆಲ ಆಭರಣ, ಒಂದು ಲಕ್ಷದಷ್ಟಿದ್ದ ನಗದು ಕಳ್ಳತನ ಆಗಿರುವುದಾಗಿ ತಿಳಿದು ಬಂದಿದೆ. ಕಳ್ಳತನ ನಡೆಸಿದ ಬಳಿಕ ಹಿಂಬದಿ ಬಾಗಿಲಿನ ಮೂಲಕ ಕಳ್ಳರು ತೆರಳಿದ್ದಾರೆ ಎನ್ನಲಾಗಿದೆ.

ಪ್ರಕರಣದ ಬಗ್ಗೆ ಕೃಷ್ಣರಾಜ್ ಅವರು ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಸುಬ್ರಹ್ಮಣ್ಯ ಠಾಣಾ ಎಸ್ ಐ ಮಂಜುನಾಥ್ ರಾತ್ರಿಯೇ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

ರಾತ್ರಿಯೇ ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಸುಬ್ರಹ್ಮಣ್ಯ ಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಕೃಷ್ಣರಾಜ್ ಅವರು ನೀಡಿರುವ ದೂರಿನಂತೆ ಸುಬ್ರಹ್ಮಣ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸಿ.ಸಿ ಕೆಮರಾ ಮತ್ತಿತರ ಮೂಲಗಳನ್ನು ಜಾಲಾಡುತಿದ್ದಾರೆ ಎಂದು ತಿಳಿದು ಬಂದಿದೆ.