ಬೆಟ್ಟಂಪಾಡಿಯಲ್ಲಿ ಮನೆಯ ಮಾಡು ಮುರಿದು ಬಿದ್ದು ಹಂಚುಗಳು ಹಾನಿ

0

ಸ್ಥಳೀಯ ಯುವಕರಿಂದ ಶ್ರಮದಾನ ಮೂಲಕ ದುರಸ್ತಿ ಕಾರ್ಯ

ಶಾಂತಿನಗರ ಬೆಟ್ಟಂಪಾಡಿ ಅಬ್ದುಲ್ಲ ಎಂಬುವವರ ಮನೆಯ ಒಂದು ಭಾಗದ ಮಾಡು ಕುಸಿದು ಬಿದ್ದು ನೂರಾರು ಹಂಚುಗಳು ಹಾನಿಗೊಂಡ ಘಟನೆ ಜುಲೈ 30 ರಂದು ರಾತ್ರಿ ಸಂಭವಿಸಿದೆ.

ಘಟನೆಯಿಂದ ಮನೆಯ ಮನೆಯ ಮಾಡು ಸಂಪೂರ್ಣ ಹಾನಿಯಾಗಿದ್ದು ಕುಸಿಯುವ ಭೀತಿ ನಿರ್ಮಾಣವಾಗಿದೆ.

ಸ್ಥಳೀಯ ಯುವಕರು ಕೂಡಲೇ ಸ್ಪಂದಿಸಿ ತಾತ್ಕಾಲಿಕವಾಗಿ ದುರಸ್ತಿ ಕಾರ್ಯ ನಡೆಸಿ ಹಂಚುಗಳನ್ನು ಮರುಜೋಡಣೆ ಮಾಡುವ ಕಾರ್ಯವನ್ನು ಶ್ರಮಧಾನದ ಮೂಲಕ ಮಾಡಿದ್ದಾರೆ.

p>

ಮನೆಯ ಸದಸ್ಯರು ತೀರ ಬಡವರಾಗಿದ್ದು ಸಂಪೂರ್ಣ ಮಾಡು ರಿಪೇರಿ ಮಾಡಲು ಆರ್ಥಿಕ ಸ್ಥಿತಿ ಇಲ್ಲದೆ ಇರುವ ಕಾರಣ ಸಂಬಂಧಪಟ್ಟ ಇಲಾಖೆಯವರು ಸ್ಪಂದಿಸಿ ಸಹಕರಿಸುವಂತೆ ಮನೆಯ ಸದಸ್ಯರು ಹಾಗೂ ಸ್ಥಳೀಯರು ಕೇಳಿಕೊಂಡಿದ್ದಾರೆ.