ಪತಿ ಅರೆಸ್ಟ್ – ಆರೋಪಿಗೆ ನ್ಯಾಯಾಂಗ ಬಂಧನ
ಪತಿ ಹಾಗೂ ಆತನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ, ಪತಿ ನನ್ನನ್ನುಕೊಲೆ ನಡೆಸಲು ಯತ್ನಿಸಿರುವುದಾಗಿ ಮಹಿಳೆಯೊಬ್ಬರು ಸುಳ್ಯ ಪೋಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೋಲೀಸರು ಪತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ಎಂಬಲ್ಲಿನ ಅಬ್ದುಲ್ ನವಾಝ್ ಎಂಬ ಯುವಕ ಮೂರು ವರ್ಷಗಳ ಹಿಂದೆ ಸುಳ್ಯದ ಪೈಚಾರು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರಿ ರಿಹಾ ಫಾತಿಮ ಎಂಬುವವರನ್ನು ಮದುವೆಯಾಗಿದ್ದರು.















ಇತ್ತೀಚೆಗೆ ದಾಂಪತ್ಯದಲ್ಲಿ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿ ವಾಸವಾಗಿದ್ದರು ಎನ್ನಲಾಗಿದೆ.
ಆದರೆ ಕಳೆದ ಕೆಲವು ದಿನಗಳಿಂದ ನವಾಜ್ ತನ್ನ ಪತ್ನಿಯನ್ನು ಅವರು ಇರುವಲ್ಲಿಗೆ ಹೋಗಿ ಮಾನಸಿಕವಾಗಿ ಕಿರುಕುಳವನ್ನು ನೀಡುತ್ತಿದ್ದರು ಎನ್ನಲಾಗಿದ್ದು ಇದೀಗ ನವಾಜ್ ರವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದು ‘ಪತಿ ತನಗೆ ಕಿರುಕುಳ ನೀಡುತ್ತಿರುವುದಲ್ಲದೆ, ವರದಕ್ಷಿಣೆ ಕಿರುಕುಳವೂ ನೀಡುತ್ತಿದ್ದಾರೆ. ನನ್ನ ಕೊಲೆಗೆ ಯತ್ನಿಸಿದ್ದಾರೆಂದು. ಹಾಗೂ ಅತ್ತೆ, ಮಾವ, ನಾದಿನಿಯರು ಅವರಿಗೆ ಸಹಕಾರ ನೀಡುತ್ತಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿರುವ ಮಹಿಳೆ ಪತಿ ಸೇರಿ ಒಟ್ಟು ಐವರ ಮೇಲೆ ಮಹಿಳೆ ಆಗಸ್ಟ್ 2 ರಂದು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ.
ಐವರ ಪೈಕಿ ಪತಿ ಅಬ್ದುಲ್ ನವಾಝ್ ನನ್ನು ಬಂಧಿಸಿರುವ ಪೋಲೀಸರು ಆ.3 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.









