ಕಲ್ಲುಗುಂಡಿ ಆರ್. ಎಂ. ಎಸ್. ಎ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ

0

ಕಲ್ಲುಗುಂಡಿ ಆರ್. ಎಂ. ಎಸ್. ಎ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಚದುರಂಗ ಸ್ಪರ್ಧೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಹೊನ್ನಪ್ಪ ಆಚಾರ್ಯ ವಹಿಸಿದ್ದರು.

ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ನೆರವೇರಸಿ ಮಾತನಾಡಿ ಚದುರಂಗ ಸ್ಪರ್ಧೆ ಮನಸ್ಸಿಗೆ ಏಕಾಗ್ರತೆ ಜೊತೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾ ಮನೋಭಾವನೆ ಮೂಡಿಸುತ್ತದೆ. ತಾಲೂಕಿನ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಬಂದಿದ್ದು ಒಳ್ಳೆಯ ಫಲಿತಾಂಶ ನೀಡಿದ ಸ್ಪರ್ದಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತರೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಕೆ ಮಾಡಿದರು.

ಶಿಕ್ಸಣ ಇಲಾಖೆಯ ಸೂಫೀ ಪೆರಾಜೆ ಪ್ರಸ್ತಾವಿಕವಾಗಿ ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದರು ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಸುಂದರಿ ಮುಂಡಡ್ಕ, ರಜನಿ ಶರತ್ , ಹನೀಫ್ ಎಸ್.ಕೆ ಹಿರಿಯ ಪ್ರಾಥಮಿಕ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಹನೀಫ್ ಚಟ್ಟೆಕಲ್ಲು, ಇಲಾಖೆಯ ತರಬೇತುದಾರರಾದ ನಟರಾಜ್, ನಾಗರಾಜ್,ಕ್ಲಸ್ಟರ್ ನ ಮಮತ ಸುಜಾತಾ ಪ್ರೌಢಶಾಲೆ ಮುಖ್ಯ ಶಿಕ್ಷ ಕರಾದ ಜಯಶ್ರೀ ಸ್ವಾಗತಿಸಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು ಶಿಕ್ಷಕಿ ಪರಿಮಳ ಕಾರ್ಯಕ್ರಮ ನಿರೂಪಿಸಿದರು.