ಊರವರ ಎಚ್ಚರಿಕೆ ಬಳಿಕ ಅಧಿಕಾರಿಗಳಿಂದ ಪರಿಶೀಲನೆ, ದುರಸ್ತಿಗೆ ಸೂಚನೆ
ಕಟ್ಟ-ಕರಂಗಲ್ಲು ರಸ್ತೆ ಹೊಸದಾಗಿ ಅಭಿವೃದ್ಧಿ ಕೆಲಸ ಕೈಗೊಂಡಿದ್ದು ಅದರ ಕಾಮಗಾರಿ ಕಳಪೆ ಎಂಬ ಆರೋಪ ಬಂದಿತ್ತು. ಊರವರ ಎಚ್ಚರಿಕೆಯ ಬಳಿಕ ಅಧಿಕಾರಿಗಳು ಬಂದು ಪರಿಶೀಲಿಸಿ ಮರು ದುರಸ್ತಿ ಮಾಡಿ ಕೊಡುವಂತೆ ಕಂಟ್ರಾಕ್ಟರ್ ಗೆ ಸೂಚಿಸಿದ ಘಟನೆ ಅ.2 ರಂದು ವರದಿಯಾಗಿದೆ.

ಕಟ್ಟ ಕರಂಗಲ್ಲು ರಸ್ತೆ ಅಭಿವೃದ್ಧಿಗಾಗಿ 5.45 ಕೋಟಿ ಅನುದಾನದಲ್ಲಿ ರಸ್ತೆ ರಸ್ತೆ ಕಾಂಕ್ರೀಟೀಕರಣ ಮಾಡಲಾಗಿತ್ತು. ಇದರೊಂದಿಗೆ ಒಂದು ಸೇತುವೆ ಹಾಗೂ ಎರಡು ಮೊರಿ ಹೊಂದಿತ್ತು.
















ರಸ್ತೆ ಅಭಿವೃದ್ದಿ ಕೆಲಸ ಪೂರ್ತಿಗೊಂಡು ಎರಡು ತಿಂಗಳಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹೋದ್ದು, ಮೇಲಿನ ಸಿಮೆಂಟ್ ಹೋಗಿ ಜಲ್ಲಿ ಎದ್ದ ಘಟನೆ ವರದಿಯಾಗಿತ್ತು. ರಸ್ತೆ ಹದಗೆಟ್ಟ ಬಗ್ಗೆ ಕಮಾಗಾರಿ ನಡೆಸಿದ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಎಕ್ಸಿಕ್ಯುಟಿವ್ ಇಂಜಿನಿಯರ್ ವೇಣುಗೋಪಾಲ, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಪ್ರಭಾಕರ, ಇಂಜಿನಿಯರ್ ಪರಮೇಶ್ವರ್ ಆಗಮಿಸಿದ್ದರು.
ಈ ಹಿನ್ನೆಲೆಯಲ್ಲಿ ರಸ್ತೆ ಕಳಪೆ ಬಗ್ಗೆ ಸ್ಥಳ ತನಿಖೆ ನಡೆಸಿದ ಅವರುಗಳು ಕಳಪೆ ಕಾಮಗಾರಿ ಕಂಡು ಬಂದ ಹಿನ್ನಲೆಯಲ್ಲಿ ಗುತ್ತಿಗೆದಾರರಿಗೆ ಕಳಪೆ ಆದಲ್ಲಿ ರಸ್ತೆ ಯನ್ನು ತೆಗೆದು ಮರು ನಿರ್ಮಿಸಿಕೊಡುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಈ ಸಂದರ್ಭ ಉದಯ ಶಿವಾಲ, ರಾಕೇಶ್ ಮುಳ್ಳುಬಾಗಿಲು, ಗಿರೀಶ್ ಹೇರ್ಕಜೆ , ನವೀನ್ ಕೊಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು.









