ಎಂ.ವೈ .ಎಸ್.ಎಣ್ಮೂರು; ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ.

0

ಎಣ್ಮೂರು – ಐವತ್ತೂಕ್ಲು ಜುಮ್ಮಾ ಮಸೀದಿ ಅಧೀನದಲ್ಲಿ ಕಳೆದ 25 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸಂಘಟನೆಯಾಗಿದೆ ಮುಸ್ಲಿಂ ಯುವಜನ ಸಂಘ (ಎಂ.ವೈ .ಎಸ್) ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ಸಂಘಟನೆಯು ಎಣ್ಮೂರು ಹಾಗೂ ಮುಚ್ಚಿಲ ಮದರಸ ವಿದ್ಯಾರ್ಥಿಗಳಿಗೆ ದೇಶಪ್ರೇಮ ಹಾಗೂ ಸ್ವಾತಂತ್ರ್ಯ ಹೋರಾಟದ ಕುರಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬಹಳ ಯಶಸ್ವಿ ಯಾಗಿ ಎಣ್ಮೂರು ಮದರಸ ಸಭಾಂಗಣದಲ್ಲಿ ಹಮ್ಮಿಕೊಂಡಿತು.

ಎಂ.ವೈ .ಎಸ್ ಅಧ್ಯಕ್ಷ ರಫೀಕ್ ಟಿ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಣ್ಮೂರು ರಹ್ಮಾನಿಯ ಕೇಂದ್ರ ಜುಮಾ ಮಸೀದಿ ಖತೀಬರಾದ ಅಲ್ ಹಾಜ್ ಅಬ್ದುಲ್ಲ ಮದನಿ ಉಸ್ತಾದ್ ಪ್ರಾರ್ಥನೆ ನಡೆಸಿದರು.

ಉದ್ಘಾಟನೆಯನ್ನು ಮುಚ್ಚಿಲ ಮದರಸ ಮುಖ್ಯೋಪಾದ್ಯಾಯರಾದ ಅಬ್ದುಲ್ ಅಝೀಝ್ ಅಮ್ಜದಿ ನಿರ್ವಹಿಸಿದರು. ಕಾರ್ಯದರ್ಶಿ ರಶೀದ್ ಅಡಿಬಾಯಿ ಸ್ವಾಗತಿಸಿದರು.ರಫೀಕ್ ಸಿ.ಎಂ ವಂದಿಸಿದರು.

ಸಿದ್ದೀಕ್ ಸಅದಿ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯಲ್ಲಿ ಸಲ್ಮಾನ್ ಹಿಮಮಿ ಸದರ್ ಉಸ್ತಾದ್ ಎಣ್ಮೂರು, ಇರ್ಷಾದ್ ಸಅದಿ ಬೆಳ್ಳಾರೆ, ಕೆ.ಸಿ ಸುಲೈಮಾನ್ ಮುಸ್ಲಿಯಾರ್, ಸಂಘಟನಾ ಪದಾಧಿಕಾರಿಗಳು, ಜಮಾಅತ್ ಸದಸ್ಯರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.