ಬೆಂಗಳೂರಿನ ಜ್ಞಾನ ಮಂದಾರ ಶೈಕ್ಷಣಿಕ ಟ್ರಸ್ಟ್ ನ ರಜತ ಮಹೋತ್ಸವ ಅಂಗವಾಗಿ ನೀಡುತ್ತಿರುವ ಬಸವಶ್ರೀ ರಾಜ್ಯ ಪ್ರಶಸ್ತಿಗೆ ಐವರ್ನಾಡಿನ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರು ಆಯ್ಕೆಯಾಗಿದ್ದಾರೆ.















ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 29ರಂದು ಬೆಂಗಳೂರಿನ ಬನಶಂಕರಿ 2ನೇ ಹಂತದ ಘನಲಿಂಗ ಶಿವಯೋಗಿ ಸಭಾಂಗಣದಲ್ಲಿ ನಡೆಯಲಿದ್ದು ಅಂದು ನವೀನ ಚಾತುಬಾಯಿಯವರು ಪ್ರಶಸ್ತಿ ಸ್ವೀಕರಿಸಲಿರುವರು.










