ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ತಂಡ ಪ್ರಥಮ

0

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಇವರ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಬಾಲಕ ಬಾಲಕಿಯರ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ತಂಡಗ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ಶಾಲಾ ಬಾಲಕರ ತಂಡದಲ್ಲಿ ಮನ್ವಿತ್ ಬಿ.ಕೆ, ಆರ್ಯನ್, ಪಿಯೂಷ್ ಲಾಲ್, ಮಧುಸೂದನ್, ಷಣ್ಮುಖ ಭಾಗವಹಿಸಿದ್ದರು. ಬಾಲಕಿಯರ ತಂಡದಲ್ಲಿ ಸೃಷ್ಟಿ, ಪ್ರಾಚೀ ಪವಾರ್, ಅಮೃತ ಹಾಗೂ ಗರಿಮ ಭಾಗವಹಿಸಿದ್ದರು.೧೪ರ ವಯೋಮಾನದ ವಿಭಾಗದಲ್ಲಿ ಅಮೃತ ಸಿ ಹಾಗೂ ಗೌರವ್ ಬಿ ಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.