ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ 76ನೇ ಸ್ವಾತಂತ್ರ್ಯ ವರ್ಷಾಚರಣೆಯು ನಡೆಯಿತು . ಅಧ್ಯಕ್ಷರಾದ ಶ್ರೀಮತಿ ಹರಿಣಿ ಡಿ.ಡಿ ಇವರು ದ್ವಜಾರೋಹಣವನ್ನು ನೆರವೇರಿಸಿದರು.

ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಬದ್ರಿಯಾ ಜುಮಾ ಮಸೀದಿಯ ಅರಂತೋಡು ನ ಅಧ್ಯಕ್ಷರಾದ ಅಶ್ರಫ್ ಗುಂಡಿ ಇವರು ಧ್ವಜವಂದನೆ ನಡೆಸಿಕೊಟ್ಟರು. ಬಳಿಕ ವೀರ ಯೋಧರಿಗೆ ನಾಮಫಲಕ ಅನಾವರಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು ನಡೆಸಿಕೊಟ್ಟರು. “ಮೇರಾ ಮಿಟ್ಟಿ ಮೇರಾ ದೇಶ್” ಕಾರ್ಯಕ್ರಮದ ಅಂಗವಾಗಿ ಪಂಚ್ ಪ್ರಾಣ್ ಪ್ರತಿಜ್ಞೆ ಸ್ವೀಕರಿಸಲಾಯಿತು. ವಸುದಾ ವಂದನ್(ಗಿಡ ನೆಡುವ) ಕಾರ್ಯಕ್ರಮಕ್ಕೆ ನೂತನ ಅಧ್ಯಕ್ಷರಾಗಲಿರುವ ಕೇಶವ ಅಡ್ತಲೆ ಇವರು ಚಾಲನೆ ನೀಡಿದರು.

ಸದರಿ ಕಾರ್ಯಕ್ರಮದಲ್ಲಿ ಆಡಳಿತ ಉಪಾಧ್ಯಕ್ಷರಾದ ಕುಮಾರಿ ಶ್ವೇತ ರವರು ಹಾಗೂ ನೂತನ ಉಪಾಧ್ಯಕ್ಷರಾಗಲಿರುವ ಭವಾನಿ ಸಿ ಎ ಇವರು, ಆಡಳಿತ ಮಂಡಳಿಯ ಸದಸ್ಯರು, ಗ್ರಾಮ ಪಂಚಾಯತ್ ನ ಸಿಬ್ಬಂದಿಗಳು, NRLM ಒಕ್ಕೂಟ ದ ಸದಸ್ಯರು ,ಆಶಾ ಕಾರ್ಯಕರ್ತೆ ಯರು ,ಘನ ಮತ್ತು ದ್ರವ ಸಂಪನ್ಮೂಲ ಸಂಘದ ಸದಸ್ಯರು ಮತ್ತು ಊರವರು ಭಾಗವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಮ್ ಆರ್ ಕಾರ್ಯಕ್ರಮ ವನ್ನು ನಡೆಸಿ ಕೊಟ್ಟರು.ಕೊನೆಯಲ್ಲಿ ಸಿಹಿತಿಂಡಿ ಮತ್ತು ಪಾನೀಯ ವಿತರಣೆ ನಡೆಯಿತು .