ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ

0

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆ ಇಂದು ಮಂಗಳೂರಿನಲ್ಲಿ ನಡೆದಿದ್ದು ಹರಿಹರ ಪಲ್ಲತಡ್ಕದ ಕೊಲ್ಲಮೊಗ್ರು ಹರಿಹರ ಪಲ್ಲತಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೇವೆಯನ್ನು ಪರಿಗಣಿಸಿ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ದೊರೆತಿದೆ.

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಪ್ರಾ. ಕೃ. ಪ. ಸಹಕಾರಿ ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ತಾರಾನಾಥ ಮುಂಡಾಚೆ, ವಿಜಯ ಕೆ.ಜೆ ಕೂಜುಗೋಡು, ವಿಜಯ ಕೆ.ಎಸ್‌ ಕಜ್ಜೋಡಿ, ಸುರೇಶ್ ಕೆ ಚಾಳೆಪ್ಪಾಡಿ, ಮೋನಪ್ಪ ಕೊಳಗೆ, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಾಮೋದರ ಕಟ್ಟೆಮನೆ, ಆಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು ಉಪಸ್ಥಿತರಿದ್ದರು.