ಜಾಲ್ಸೂರು: ಖಾಸಗಿ ಬಸ್ – ಕಾರು ಅಪಘಾತ ಜಖಂ

0

ಖಾಸಗಿ ಬಸ್ ಹಾಗೂ ಕಾರಿನ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮವಾಗಿ ಎರಡೂ ವಾಹನಗಳು ಜಖಂಗೊಂಡ ಘಟನೆ ಜಾಲ್ಸೂರು ಗ್ರಾಮದ ಮಹಾಬಲಡ್ಕದಲ್ಲಿ ಆ.23ರಂದು ಬೆಳಿಗ್ಗೆ ಸಂಭವಿಸಿದೆ.

ಸುಳ್ಯದಿಂದ ಕಾಸರಗೋಡಿಗೆ ತೆರಳುತ್ತಿದ್ದ ದೇವಿ ಬಸ್ ಗೆ ಮುಳ್ಳೇರಿಯಾ ಕಡೆಯಿಂದ ಜಾಲ್ಸೂರು ಕಡೆಗೆ ಬರುತ್ತಿದ್ದ ಕಾರೊಂದು ಅತೀ ವೇಗದಿಂದ ಬಂದ ಪರಿಣಾಮವಾಗಿ ಮಹಾಬಲಡ್ಕ ತಿರುವಿನಲ್ಲಿ ಢಿಕ್ಕಿ ಹೊಡೆದಿದ್ದು, ಎರಡೂ ವಾಹನಗಳು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.