ಬಳ್ಪ ಗ್ರಾಮಸಭೆ

0

ಅಧಿಕಾರಿಗಳ ಗೈರು – ಗ್ರಾಮಸ್ಥರ ಸಂಖ್ಯೆಯೂ ಕಡಿಮೆ

ಗ್ರಾಮ ಸಭೆ ಮುಂದೂಡಲು ಗ್ರಾಮಸ್ಥರ ಆಗ್ರಹ

ಬಳ್ಪ ಗ್ರಾ.ಪಂ.ನ‌ 2023-24ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಆ. 24ರಂದು ಬಳ್ಪ ಸ.ಉ.ಹಿ.ಪ್ರಾ. ಶಾಲಾ ಸಭಾಭವನದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪಿ.ಡಿ. ಪಾರ್ವತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಡಬ ತಾ.ಪಂ. ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಗ್ರಾಮಸ್ಥರು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಮತ್ತು ಇಲಾಖಾಧಿಕಾರಿಗಳ ಗೈರು ಇದೆ. ಗ್ರಾಮ ಸಭೆ ಮುಂದೂಡಬೇಕೆಂದು ಸಭೆಯಲ್ಲಿ ಆಗ್ರಹಿಸಿದರು. ಬಳಿಕ

ಎಲ್ಲರ ಒಮ್ಮತದಂತೆ ಸಭೆಯನ್ನು ಮುಂದುವರಿಸುವುದೆಂದು ತೀರ್ಮಾನಿಸಲಾಯಿತು.

ಪಂಚಾಯತ್ ಸದಸ್ಯರುಗಳಾದ ರಾಜೀವ ಗೌಡ ಕಣ್ಕಲ್, ಚಂದ್ರಶೇಖರ ಅಕ್ಕೇಣಿ, ಪ್ರಶಾಂತ್ ಪೊಟ್ಟುಕೆರೆ , ದಿವಾಕರ ಎಣ್ಣೆಮಜಲು, ಶ್ರೀಮತಿ ಕುಸುಮಾ ಎಸ್.ರೈ, ಶ್ರೀಮತಿ ಶಶಿಕಲಾ ಸೂಂತಾರು, ಶ್ರೀಮತಿ ಶೈಲಜಾ ಎಣ್ಣೆಮಜಲು, ಶ್ರೀಮತಿ ಸುನಿತಾ ಸಂಪ್ಯಾಡಿ ಮತ್ತು ಶ್ರೀಮತಿ ನೇತ್ರಾವತಿ ಹೊಪ್ಪಾಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಪ್ರಭಾರ ಪಿ.ಡಿ.ಒ. ರಘು ಎನ್.ಬಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಳ್ಪ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಸಿದರು. ಸಿಬ್ಬಂದಿ ಯೋಗೀಶ್ ಕುಳ ವರದಿ ವಾಚಿಸಿದರು.