ರಥಬೀದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ರಿಕ್ಷಾಕ್ಕೆ ಕಾರು ಡಿಕ್ಕಿ : ವಾಹನಗಳೆರಡು ಜಖಂ

0

ಸುಳ್ಯದ ರಥಬೀದಿಯ ದುರ್ಗಾ ಕಾಂಪ್ಲೆಕ್ಸ್ ಎದುರಿನ ರಿಕ್ಷಾ ಪಾರ್ಕಿಂಗ್ ನಲ್ಲಿ ಸುಬ್ರಹ್ಮಣ್ಯ ಕೇರ್ಪಳ ರವರು ನಿಲ್ಲಿಸಿದ್ದ ರಿಕ್ಷಾಕ್ಕೆ ಆಲ್ಟೋ ಕಾರು ಡಿಕ್ಕಿ ಹೊಡೆದು ಕಾರು ಹಾಗೂ ರಿಕ್ಷಾ ಎರಡು ಜಖಂಗೊಂಡ ಘಟನೆ ಇಂದು ಸಂಜೆ ವರದಿಯಾಗಿದೆ.

ರಥಬೀದಿಯಎಡ ಬದಿಯಿಂದ ಮಹಿಳೆಯೋರ್ವರು ಚಲಾಸಯಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಎದುರುಗಡೆ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಅಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾದಲ್ಲಿ ಮುಂದಿನ ಸೀಟಿನಲ್ಲಿ ಕುಳಿತಿದ್ದ‌ ಸುಬ್ರಹ್ಮಣ್ಯ ರವರು ರಿಕ್ಷಾದಿಂದ ಹೊರಗೆಸೆಯಲ್ಪಟ್ಟರು. ಅದೃಷ್ಟವಶಾತ್ ರಿಕ್ಷಾದ ಚಾಲಕ ಹಾಗೂ ಕಾರಿನಲ್ಲಿ ಇದ್ದ ದಂಪತಿಗಳು ಯಾವುದೇ ಗಾಯವಾಗದೆ ಪಾರಾಗಿದ್ದಾರೆ.

ಕಾರಿನಲ್ಲಿ ವೃದ್ದ ದಂಪತಿಗಳಿಬ್ಬರು ಮಾತ್ರವಿದ್ದು ಕಾರನ್ನು ಮಹಿಳೆ ಚಲಾಯಿಸುತ್ತಿದ್ದರು. ಮಹಿಳೆ ಕಾರನ್ನು ರಸ್ತೆಯ ಎಡ ಬದಿಯಿಂದ ಬಲ ಬದಿಗೆ ತಿರುಗಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಹಾಗೂ ರಿಕ್ಷಾದ ಬಲ ಬದಿಯು ಜಖಂಗೊಂಡಿದೆ.

ಅಟೋ ಚಾಲಕರ ಹಾಗೂ ಸ್ಥಳೀಯರ ಸಮ್ಮುಖದಲ್ಲಿ ಮಾತುಕತೆಯೊಂದಿಗೆ ಪ್ರಕರಣವನ್ನು ರಾಜಿ ಪಂಚಾತಿಕೆಯೊಂದಿಗೆ ಇತ್ಯರ್ಥ ಪಡಿಸಲಾಯಿತು ಎಂದು ತಿಳಿದು ಬಂದಿದೆ.