ಶೀಘ್ರದಲ್ಲಿ ಬೆಳ್ಳಾರೆಯಲ್ಲಿ 5 ಜಿ ಸೇವೆ ಆರಂಭ!
ಬೆಳ್ಳಾರೆಯ ಉದ್ಯಮಿ ಜಯಪ್ರಸಾದ್ ಜೋಶಿಯವರ ಮುಂದಾಳತ್ವದಲ್ಲಿರುವ ಬಳಕೆದಾರರ ವೇದಿಕೆಯ ಮೂಲಕ ಬೆಳ್ಳಾರೆಯಲ್ಲಿ ಜಿಯೋ ನೆಟ್ವರ್ಕ್ ಕ್ಷೀಣಿಸಿರುವ ಬಗ್ಗೆ ಹಲವು ಬಾರಿ ಕಂಪನಿಗೆ ಪತ್ರ ಮುಖೇನ ತಿಳಿಸಲಾಗಿತ್ತು.















ಇವರ ಮನವಿಗೆ ಸ್ಪಂದಿಸಿದ ಕಂಪೆನಿ ವರಿಷ್ಟರು ಬೆಳ್ಳಾರೆಯಲ್ಲಿ ಜಿಯೋ ನೆಟ್ವರ್ಕ್ ಹೆಚ್ಚಿಸಲು ಬೇಕಾದ ಉಪಕರಣಗಳನ್ನು ತಂದು ಹಾಕಿರುವುದಾಗಿ ತಿಳಿದು ಬಂದಿದೆ. ಅಲ್ಲದೆ 5ಜಿ ನೆಟ್ವರ್ಕ್ ಕೂಡಾ ಮಂಜೂರಾಗಿದ್ದು,
ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ 5 ಜಿ ನೆಟ್ವರ್ಕ್ ಲಭ್ಯವಾಗಲಿರುವುದಾಗಿ ಜಿಯೋ ನೆಟ್ವರ್ಕ್ ಕಂಪನಿಯ ವರಿಷ್ಠರು ತಿಳಿಸಿದ್ದಾರೆಂದು ಬೆಳ್ಳಾರೆ ಬಳಕೆದಾರರ ವೇದಿಕೆಯ ಅಧ್ಯಕ್ಷ ಜಯಪ್ರಸಾದ್ ಜೋಶಿ ತಿಳಿಸಿರುತ್ತಾರೆ.









