ಗಾಂಧಿನಗರ ಕೆಪಿಎಸ್‌ನಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಪುಟ್ಬಾಲ್ ಪಂದ್ಯಾಟ

0

ಗಾಂಧಿನಗರ ಕೆಪಿಎಸ್ ಪ್ರಥಮ, ಅಜ್ಜಾವರ ಸ.ಹಿ.ಪ್ರಾ.ಶಾಲೆ ದ್ವಿತೀಯ

ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಪುಟ್ಬಾಲ್ ಪಂದ್ಯಾಟ ಆ. 28 ರಂದು ಗಾಂಧಿನಗರ ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯಿತು.

ಕೆಪಿಎಸ್‌ನ ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ ಪಂದ್ಯಾಟ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಶ್ರೀಮತಿ ನಳಿನಿ, ಗಾಂಧಿನಗರ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೆ.ಕೆ. ರೈ, ಕೆಪಿಎಸ್ ಪ್ರಾಂಶುಪಾಲ ಸಮದ್, ಉಪ ಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಲಕ್ಷ್ಮಿ, ದೈ.ಶಿ.ಶಿ. ಸಂಘದ ಅಧ್ಯಕ್ಷ ಧನಂಜಯ ಇಡ್ಯಡ್ಕ, ಸಿಆರ್‌ಪಿ ಶ್ರೀಮತಿ ಮಮತಾ, ಮೊಯಿದಿನ್,ಅಬ್ದುಲ್ ಮಜೀದ್, ಶಿಕ್ಷಕಿ ಶ್ರೀಮತಿ ಪದ್ಮಿನಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಪದ್ಮನಾಭ ಅತ್ಯಾಡಿ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಾಲೂಕು ಕ್ರೀಡಾಧಿಕಾರಿ ಸೂಫಿ ಪೆರಾಜೆ, ನ.ಪಂ. ಸದಸ್ಯ ಶರೀಫ್ ಕಂಠಿ, ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ ಬಹುಮಾನ ವಿತರಿಸಿದರು.

ಪದ್ಮನಾಭ ಅತ್ಯಾಡಿ ಸ್ವಾಗತಿಸಿ, ಎ.ಜಿ. ಭವಾನಿ ವಂದಿಸಿದರು. ಸಹಶಿಕ್ಷಕರು ಸಹಕರಿಸಿದರು.

ಪುಟ್ಬಾಲ್ ಪಂದ್ಯಾಟದಲ್ಲಿ ಗಾಂಧಿನಗರ ಕೆಪಿಎಸ್ ಪ್ರಥಮ, ಅಜ್ಜಾವರ ಸ.ಹಿ.ಪ್ರಾ.ಶಾಲೆ ದ್ವಿತೀಯ ಸ್ಥಾನಗಳಿಸಿದ್ದಾರೆ.

ರೆಫರಿಗಳಾಗಿ ಮುನಾಫರುದ್ದಿನ್, ಮುನೀರ್, ಇಂತ್ಯಾಜ್ ಸಹಕರಿಸಿದರು.