ನೇಲ್ಯಡ್ಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಕೇನ್ಯ ಗ್ರಾಮದ ನೇಲ್ಯಡ್ಕ ಸ. ಕಿ.ಪ್ರಾ. ಶಾಲೆಯಲ್ಲಿ ನೂತನ ಹಿರಿಯ ವಿದ್ಯಾರ್ಥಿ ಸಂಘ ರಚಿಸಲಾಯಿತು. ಅಧ್ಯಕ್ಷರಾಗಿ ಸುರೇಶ್ ಎನ್ , ಉಪಾಧ್ಯಕ್ಷರಾಗಿ ಚಂದ್ರಶೇಖರ್, ಕಾರ್ಯದರ್ಶಿಯಾಗಿ ಮಿಥುನ್ ಕಣ್ಕಲ್, ಕೋಶಾಧಿಕಾರಿ ಯಾಗಿ ಜಯ ವಿನೋದ್ , ಗೌರವ ಸಲಹೆಗಾರರಾಗಿ ದೇವಿಪ್ರಸಾದ್ ರೈ ಗೆಜ್ಜೆ ಮತ್ತು ಉದಯ ಅಮ್ಮಣ್ಣಾಯ ಆಯ್ಕೆಯಾದರು. ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಕೆರೆಕ್ಕೋಡಿ ರಘುನಾಥ ರೈ,ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಿ ನಾಯ್ಕ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ, ಗೌರವಾಧ್ಯಕ್ಷ ವಾಸುದೇವ ಆನೆಮನೆ, ಬೀಟ್ ಪೊಲೀಸ್ ಗುರುಬಸು, ಸ್ಥಳೀಯರಾದ ತಿಮ್ಮಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಪುರುಷೋತ್ತಮ ಬಿ ಸ್ವಾಗತಿಸಿ, ವಂದಿಸಿದರು. ಸಹಶಿಕ್ಷಕಿ ಅಶ್ವಿತಾ ಕಾರ್ಯಕ್ರಮ ನಿರೂಪಿಸಿದರು.