ಸುಬ್ರಹ್ಮಣ್ಯ: ಗೌಡ ಸೇವಾ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ

0
ಡಾ|ಎ.ಎ.ತಿಲಕ್,
ಡಾ|ಎ.ಎ.ತಿಲಕ್,
ವಿಶ್ವನಾಥ ನಡುತೋಟ

ಸುಬ್ರಹ್ಮಣ್ಯ ಗೌಡ ಸೇವಾ ಸಂಘದ ಗ್ರಾಮ ಸಮಿತಿಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸೆ. 8 ರಂದ ನಡೆಯಿತು. ಸಭೆಯಲ್ಲಿ ಕಡಬ ತಾಲೂಕು ಗೌಡ ಸೇವಾ ಸಂಘದ ನಿಕಟ ಪೂರ್ವ ಅಧ್ಯಕ್ಷ ತಮ್ಮಯ್ಯಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ , ಸಂಘಟನಾ ಕಾರ್ಯದರ್ಶಿ ಶಿವರಾಮ ಏನೆಕಲ್ ಹಾಗೂ ಮ್ಯಾನೇಜರ್ ರತ್ನಾಕರ್ ಇವರು ಉಪಸ್ಥಿತರಿದ್ದರು.

ತಾಲೂಕು ಗೌಡ ಸಮಿತಿಯ ಸೂಚನೆಯಂತೆ ಸುಬ್ರಹ್ಮಣ್ಯ ಗ್ರಾಮ ಸಮಿತಿಯನ್ನ ಪುನರ್ ರಚನೆ ಮಾಡಲಾಯಿತು. ಮುಂದಿನ ಸಾಲಿನ ಅಧ್ಯಕ್ಷರಾಗಿ ಡಾ|ಎ.ಎ.ತಿಲಕ್, ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ನಡುತೋಟ , ಉಪಾಧ್ಯಕ್ಷರಾಗಿ ಪ್ರಭಾಕರ ಪಡ್ರೆ, ಗಿರಿಧರ ಸ್ಕಂದ, ಕೋಶಾಧಿಕಾರಿಯಾಗಿ ನಾರಾಯಣ ಅಗ್ರಹಾರ, ಜೊತೆ ಕಾರ್ಯದರ್ಶಿಯಾಗಿ ಹರ್ಷ ಹೊಸೋಳಿಕೆ, ಮಹಿಳಾ ಘಟಕದ ಅಧ್ಯಕ್ಷರಾಗಿ ಭಾರತಿ ದಿನೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಸುಬ್ರಹ್ಮಣ್ಯ ವಲಯದಿಂದ ಕಡಬ ತಾಲೂಕು ಸಮಿತಿಗೆ ಗೋಪಾಲ ಎಣ್ಣೆಮಜಲ್, ಹಾಗೂ ಲೋಕೇಶ್ ಬಿ .ಎನ್. ಅವರುಗಳನ್ನ ಆಯ್ಕೆ ಮಾಡಲಾಗಿದೆ.