ಐನೆಕಿದು: ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಬಿದ್ದು ಗಾಯ, ಕಾರ್ಯಕ್ರಮ ಸ್ಥಗಿತ

0

ಐನೆಕಿದು ಶಾಲಾ ಬಳಿ ಇಂದು ನಡೆಯಬೇಕಿದ್ದ ಅಷ್ಟಮಿ ಕಾರ್ಯಕ್ರಮಕ್ಕೆ ಮೊಸರು ಕುಡಿಕೆ ಕಂಬ ಸ್ಥಾಪನೆ ವೇಳೆ ಯುವಕನೊಬ್ಬ ಕಂಬದಿಂದ ಬಿದ್ದು ಗಾಯಗೊಂಡ ಪರಿಣಾಮ ಕಾರ್ಯಕ್ರಮ ಸ್ಥಗಿತವಾದ ಘಟನೆ ವರದಿಯಾಗಿದೆ.

ಮೊಸರು ಕುಡಿಕೆ ಕಂಬ ನಿಲ್ಲಿಸಿ ಕಂಬಕ್ಕೆ ಹತ್ತಿ ಭರತ್ ಎನ್ನುವವರು ಗ್ರೀಸ್ ಹಚ್ಚುತಿದ್ದರೆನ್ನಲಾಗಿದೆ. ಕಂಬದಿಂದ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಸಂಘಟಕರು ಅಷ್ಟಮಿ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ತಿಳಿದು ಬಂದಿದೆ.