ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ “ರಾಜ್ಯ ಮಟ್ಟಕ್ಕೆ” ಆಯ್ಕೆ

0

ಪ್ರಸಕ್ತ ೨೦೨೩-೨೪ನೇ ಸಾಲಿನ KISA (Karnataka ICSE Schools Association) ಬೆಂಗಳೂರು ಇವರು ಆಯೋಜಿಸಿರುವಂತಹ “ಕಲೋತ್ಸವ -೨೦೨೩-೨೪” ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಒಂದನೇ ತರಗತಿಯ ರಿಯಾ ಕೆ.ವಿ , ಎರಡನೇ ತರಗತಿಯ ವಿದ್ವಾನ್ ಆರ್. ದಾಸ್, ಮೂರನೇ ತರಗತಿಯ ನಿಹಾಲ್ ಕೆ. ಎ, ನಾಲ್ಕನೇ ತರಗತಿಯ ಲಾಸ್ಯ ಎಮ್. ಎಸ್. ಹಾಗೂ ಐದನೇ ತರಗತಿಯ ಆರಾಧ್ಯ ಎ.ಆರ್. ಇವರು ಆಯ್ಕೆಯಾಗಿದ್ದಾರೆ ಮತ್ತು ಸೆ. ೨೨ ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.