ರಸ್ತೆ ಬದಿಯಲ್ಲಿ ಕಸ ಎಸೆದವರಿಗೆ ನ.ಪಂ.ನಿಂದ ದಂಡದ ಅಸ್ತ್ರ ಪ್ರಯೋಗ

0

ರಥಬೀದಿಯಲ್ಲಿ ಕಸ ಎಸೆದವರಿಗೆ ರೂ. 2 ಸಾವಿರ ದಂಡ

ಸುಳ್ಯದ ರಥಬೀದಯಲ್ಲಿ ಕಸ ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿದ ನಗರ ಪಂಚಾಯತ್ ಆ ವ್ಯಕ್ತಿಗೆ ರೂ.2 ಸಾವಿರ ‌ದಂಡ ವಿಧಿಸಿ ಎಚ್ಚರಿಕೆ‌ ನೀಡಿರುವ ಘಟನೆ ವರದಿಯಾಗಿದೆ. ಜು.12 ರಂದು ರಾತ್ರಿ ಸುಳ್ಯದ ರಥಬೀದಿಯಲ್ಲಿ ವ್ಯಕ್ತಿಯೊಬ್ಬರು ಕಸವನ್ನು ಪ್ಲಾಸ್ಟಿಕ್ ನಲ್ಲಿ ಕಟ್ಟಿ ಎಸೆದಿದ್ದರು. ಅಲ್ಲೇ ಪಕ್ಕದಲ್ಲಿ ರಿಕ್ಷಾ‌ ನಿಲ್ದಾಣ ಇರುವುದರಿಂದ ರಿಕ್ಷಾ ಚಾಲಕರು ಆ ಪ್ಲಾಸ್ಟಿಕ್ ನ್ನು ಹರಿದು ನೋಡಿದಾಗ ಅದರಲ್ಲಿ ವಂಶಿಕೃಷ್ಣ ಎಂದು ಒಂದು‌ ಚೀಟಿ ಹಾಗೂ ಅವರ ವಿಳಾಸ ಸಿಕ್ಕಿತು. ಸ್ಥಳಕ್ಕೆ ನಗರ ಪಂಚಾಯತ್ ನವರೂ ಬಂದರು.

ಬಳಿಕ ನ.ಪಂ. ನಿಂದ ವಿದ್ಯಾರ್ಥಿ ವಂಶಿಕೃಷ್ಣರಿಗೆ ನೋಟೀಸ್ ಮಾಡಲಾಯಿತು. ಅವರು ಸೆ.14 ರಂದು ನ.ಪಂ. ಗೆ ಬಂದರು. ಅವರಿಗೆ ರೂ.2 ಸಾವಿರ ದಂಡ ಹಾಕಲಾಯಿತು. ಅದನ್ನು ವಿದ್ಯಾರ್ಥಿ ಪಾವತಿಸಿದರು. ಬಳಿಕ ಅವರಿಗೆ ಎಚ್ಚರಿಕೆ‌ ನೀಡಿ, ಸ್ವಚ್ಚ ಸುಳ್ಯದ ಕುರಿತು ಜಾಗೃತಿ‌ ಮೂಡಿಸಲಾಯಿತೆಂದು ತಿಳಿದುಬಂದಿದೆ.