ಸೆ.19 : ಗೋಳಿಯಡ್ಕ ಮರ್ಕಂಜದಲ್ಲಿ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

0

ಭಜನಾ ಕಾರ್ಯಕ್ರಮ, ದೇವರಿಗೆ ಮಹಾಪೂಜೆ ಸಂಜೆ ವಿಜ್ರಂಭಣೆಯ ಶೋಭಾಯಾತ್ರೆ

ಮರ್ಕಂಜ ಗೊಳಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 7ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯು ಸೆ.19ರಂದು ವಿಜ್ರಂಭಣೆಯಿಂದ ನಡೆಯಿತು.ಬೆಳಿಗ್ಗೆ ಗಣಪತಿ ಹವನ, ಗಣಪತಿ‌ ವಿಗ್ರಹ ಆಗಮನ, ವಿಗ್ರಹ‌ ಪ್ರತಿಷ್ಠಾಪನೆ, ಬೆಳಗ್ಗಿನ‌ ಪೂಜೆ ನಡೆಯಲಿದೆ. ಬಳಿಕ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕಾವೂರು,

ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಂಗಡಿಮಜಲು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಿನುಂಗೂರು ರವರಿಂದ‌ ಭಜನಾ‌ ಕಾರ್ಯಕ್ರಮ ನಡೆಯಿತು. ಹಾಗೂ ಶ್ರೀ ಪ್ರಸನ್ನಾಂಜನೇಯ ಭಜನಾ ಮಂಡಳಿ ಅಂಜನಾದ್ರಿ, ಅಡ್ಕಾರು ಇವರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಗೋಳಿಯಡ್ಕ, ಅಂಗಡಿಮಜಲು, ಬಲ್ನಾಡುಪೇಟೆ,

ತೇರ್ಥಮಜಲು ಭಾಗದಲ್ಲಿ ವಿಜ್ರಂಭಣೆಯ ಶೋಭಾಯಾತ್ರೆ ನಡೆದು ಕಾಯಿಪಳ್ಳದಲ್ಲಿ‌ ವಿಸರ್ಜನೆ ನಡೆಯಿತು.ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು, ಊರವರು ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಪಾಲ್ಗೊಂಡು‌ ದೇವರ ಪ್ರಸಾದ ಸ್ವೀಕರಿಸಿದರು.